ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ.

0
165

ಬೆಂಗಳೂರು:- ನಿನ್ನೆ ಸಂಜೆ ಕಾಣೆಯಾಗಿದ್ದ ಬಾಲಕ ಇಂದು ಕಲ್ಲು ಕ್ವಾರಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಹುಳಿಮಾವು ಸಮೀಪದ ಅಕ್ಷಯ ನಗರದಲ್ಲಿ ನಡೆದಿದೆ. ಹುಳಿಮಾವು ನಿವಾಸಿ ವಿಶ್ವನಾಥ್ ಹೊಸಮಠ್(೧೪) ಮೃತ ಬಾಲಕ. ನಿನ್ನೆ ಸಂಜೆ ಸ್ನೇಹಿತರೊಂದಿಗೆ ಆಟವಾಡಲು ಹೋದವನು ರಾತ್ರಿಯಾದ್ರು ಮನೆಗೆ ಬಂದಿರಲಿಲ್ಲ. ಸಂಬಂಧಿಗಳ ಮನೆ ಸೇರಿದಂತೆ ಎಲ್ಲೆಡೆ ಹುಡುಕಾಡಿದ್ರು ಪತ್ತೆಯಾಗಿರಲಿಲ್ಲ. ಹಾಗಾಗಿ ಇಂದು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮೃತನ ಪೋಷಕರು ದೂರು ದಾಖಲು ಮಾಡಿದ್ರು. ತನಿಖೆ ವೇಳೆ ಬಾಲಕನ ಸೈಕಲ್ ಮತ್ತು ಚಪ್ಪಲಿ ಬಿಟಿಎಂ ರೆಸಿಡೆನ್ಸಿ ಸಮೀಪದ ಕಲ್ಲು ಕ್ವಾರಿ ಬಳಿ ಪತ್ತೆಯಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಕಲ್ಲು ಕ್ವಾರಿಯಲ್ಲಿ ಶೋಧ ನಡೆಸಿದ ವೇಳೆ ಮೃತ ದೇಹ ಪತ್ತೆಯಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here