ಕಾನೂನು ಅರಿವು ಕಾರ್ಯಕ್ರಮ.

0
58

ಮಂಡ್ಯ/ಮಳವಳ್ಳಿ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಅಂತರ ರಾಷ್ಟ್ರೀಯ ಮಹಿಳೆಯರ ಮೇಲಿನ ಹಿಂಸಾ ನಿರ್ಮೂಲನಾ ದಿನ. ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ. ಮಳವಳ್ಳಿ ತಾಲ್ಲೂಕು ಬಂಡೂರುಬಸವನಗುಡಿ ಬಳಿ ನಡೆಸಲಾಯಿತು . ಕಾರ್ಯಕ್ರಮದಲ್ಲಿ ವಕೀಲ ಶ್ರೀನಿವಾಸ್ ಮಾತನಾಡಿ, ಮಹಿಳೆಯರಿಗೂ ಆಸ್ತಿ ಯಲ್ಲಿ ಸಮಪಾಲು ಇದೆ. ಮಹಿಳೆಯರು ಯಾವ ರೀತಿ ಆಸ್ತಿಯನ್ನು ಪಡೆಯಬಹುದು. ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಬಂಡೂರು ಗ್ರಾಮ. ಪಂಚಾಯಿತಿ ಪಿಡಿಒ ಕುಮಾರ್ ಮಾತನಾಡಿ ಮಹಿಳೆಯರು ಸಮಸ್ಯೆಯನ್ನು ಹೇಳಿಕೊಳ್ಳಲು ಮುಂದೆ ಬರಬೇಕು ಆಗ ಮಾತ್ರ ಮಹಿಳೆಯರು ಸಬಲೀಕರಣವಾಗಲು ಸಾದ್ಯ ಎಂದರು ಇನ್ನೂ ಜನವಾದಿ ಮಹಿಳೆ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ ಮಾತನಾಡಿ, ಮಹಿಳೆಯರ ಮೇಲೆ ಶೋಷಣೆ ನಿರಂತರವಾಗಿ ನಡೆಯತ್ತಿದೆ. ನಾವೆಲ್ಲರೂ ಸಂಘಟಿತರಾಗಬೇಕು. ಯಾವುದೇ ಅನ್ಯಾಯಕ್ಕೆ ಒಳಾಗದ ಮಹಿಳೆಯರು ಹೋರಾಟ ಮಾಡಲು ಮುಂದೆ ಬಂದರೆ ನ್ಯಾಯ ಸಿಗುತ್ತದೆ. ಜೊತೆಗೆ ವಿಧಾನ ಸಭೆಯಲ್ಲಿಯೂ ಸಹ ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಗಬೇಕು. ಶೇ 50 ರಷ್ಟು ಮೀಸಲಾತಿ ನೀಡಿದಾಗ ಮಾತ್ರ ಮಹಿಳೆಯರಿಗೆ ನ್ಯಾಯ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುಶೀಲಾ, ಮಣಿಯಮ್ಮ, ಗ್ರಾಮ ಪಂಚಾಯಿತಿ ಸದಸ್ಯೆ ಬೋರಮ್ಮ, ಚೆನ್ನಾಜಮ್ಮ, ಭಾಗ್ಯಮ್ಮ, ಜನವಾದಿ ಮಹಿಳೆ ಸಂಘಟನೆ ಸದಸ್ಯ ರಾದ ನಂಜಮ್ಮಣಿ, ಪ್ರೇಮ, ವರದೇವಿ, ಜಯಲಕ್ಷ್ಮಿ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here