ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ…

0
118

ವಿಜಯಪುರ/ಸಿಂದಗಿ:ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಭ್ರೂಣಹತ್ಯೆ ಹೆಚ್ಚು ತ್ತಿದ್ದು ಇದು ಲಿಂಗ ತಾರತಮ್ಯದ ಅನುಪಾತವನ್ನು ಹೆಚ್ಚಿಸುತ್ತಿದೆ. ಇದು ಹತ್ತು ಹಲವು ಸಾಮಾಜಿಕ ಎಡ ವಟ್ಟುಗಳಿಗೆ ಕಾರಣವಾಗುತ್ತಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ದಿವಾಣಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಆತಂಕ ವ್ಯಕ್ತಪಡಿಸಿದರು. ಸಿಂದಗಿ ತಾಲೂಕು ಕಾನೂನು ಸೇವಾ ಸಮಿತಿ, ಸಿಂದಗಿ ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಮತ್ತು ನೆರವು ಕಾಯ೯ಕ್ರಮ..

ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ. ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಹಾಗೂ ಮಹಿಳಾ ಕ್ರೀಡಾಕೂಟ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಹೆಣ್ಣು ಮಗುವನ್ನು ಕೇವಲ ಪುರುಷರಷ್ಟೆ ಕೀಳರಿಮೆಯಿಂದ ನೋಡುತ್ತಿಲ್ಲ. ಬದಲಿಗೆ ಮಹಿಳೆ ಯರೂ ಸಹ ಹೆಣ್ಣು ಮಗುವೆಂದರೆ ತಾತ್ಸಾರದಿಂದ ಕಾಣುವ ವಾತಾವರಣ ನಿರ್ಮಾಣವಾಗಿರುವುದು ಹೆಣ್ಣು ಭ್ರೂಣಹತ್ಯೆ ಹೆಚ್ಚಲು ಕಾರಣವಾಗಿದೆ. ಇದರಿಂದ ಪ್ರತಿ ಗಂಡಿಗೂ ಒಂದು ಹೆಣ್ಣು ಸಿಗದೆ ಲಿಂಗ ತಾರತಮ್ಯ ಹೆಚ್ಚುತ್ತಿದೆ. ಇದು ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಹೆಣ್ಣಿನ ಸಂತತಿಯೇ ಇಲ್ಲದಾಗಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಯ೯ಕ್ರಮದಲ್ಲಿ ಶ್ರೀಮತಿ ರಾಜೇಶ್ವರಿ ಮನಗೂಳಿ. ಪವಿತ್ರಾಜಿ ರಾಜಯೋಗಿಣಿ. ಶೈಲಜಾ ಸ್ತಾವರಮಠ ಬಿ ಸಿ ಕೋಣ್ಣೂರ ವಕೀಲರು ಮುಂತಾದವರು ಇದ್ದರು

LEAVE A REPLY

Please enter your comment!
Please enter your name here