ಕಾಪೌಂಡ್ ನಿರ್ಮಾಣಕ್ಕೆ ಭೂಮಿ ಪೂಜೆ.

0
427

ಬಳ್ಳಾರಿ /ಹೊಸಪೇಟೆ:ನಗರದ ಸಂಡೂರು ರಸ್ತೆಯಲ್ಲಿರುವ ವಾಲ್ಮೀಕಿ ಫ್ರೌಡಶಾಲಾ ಕಾಪೌಂಡ್ ನಿರ್ಮಾಣ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್, ಸೋಮವಾರ ಭೂಮಿಪೂಜೆ ನೆರವೇರಿಸಿದರು.

ನಗರಸಭೆ 22.75 ಎಸ್‌ಸಿ/ಎಸ್‌ಟಿ ಅನುದಾನದ 14 ಲಕ್ಷ ವೆಚ್ಚದಲ್ಲಿ ಮೊದಲ ಹಂತದ ಕಾಂಪೌಂಡ್
ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಯಿತು. ನಗರಸಭೆ ಏಳು ಜನ ಸದಸ್ಯರು ತಮ್ಮ ವಾರ್ಡಿನ
ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನದ ತಲಾ 2 ಲಕ್ಷ ರೂ.ಗಳಂತೆ ಒಟ್ಟು 14 ಲಕ್ಷ ಹಣವನ್ನು
ಶಾಲಾ ಕಾಂಪೌಂಡಿಗೆ ನೀಡುವ ಮೂಲಕ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ.*

ನಗರಸಭೆ ಸದಸ್ಯರಾದ ಗುಡಗುಂಟಿ ಮಲ್ಲಿಕಾರ್ಜುನ, ಉಮಾದೇವಿ ಶೀಕಂಠ, ಗಿಂಜಿ ಮಂಜುನಾಥ,
ಗುಜ್ಜಲ್ಲ ನಿಂಗಪ್ಪ, ಇಡ್ಲಿ ಚೆನ್ನಮ್ಮ, ಜಿ.ಪದ್ಮಾವತಿ, ಹಾಗೂ ಶ್ರೀಧರ ನಾಯ್ಡು ತಲಾ 2ಲಕ್ಷ
ರೂ ಅನುದಾನ ನೀಡುವ ಮೂಲಕ ಶಿಕ್ಷಣ ಪ್ರೀತಿ ತೋರಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಧಮೇಂದ್ರ ಸಿಂಗ್ ಮಾತನಾಡಿ, ಶಾಲೆಗೆ ಕಾಪೌಂಡ್ ಇಲ್ಲದೇ
ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ವಿದ್ಯಾರ್ಥಿಗಳಿಗೆ
ಶಿಕ್ಷಣ ಪೂರಕ ವಾತವರಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲಾ ಕಾಪೌಂಡ್ ನಿರ್ಮಾಣ ಮಾಡಲು
ಕ್ರಮ ಕೈಗೊಳ್ಳಲಾಗಿದೆ. ವಾಲ್ಮೀಕಿ ಫ್ರೌಡಶಾಲೆ ಕಾಂಪೌಂಡ್ ನಿರ್ಮಾಣಕ್ಕಾಗಿ ನಗರಸಭೆ
ಸದಸ್ಯರು, ತಲಾ 2ಲಕ್ಷದಂತೆ 14 ಲಕ್ಷ ಅನುದಾನ ನೀಡಿದ್ದು, ಈ ಹಣ ಶಾಲಾ ಕಾಪೌಂಡ್ ನಿರ್ಮಾಣ
ಸಾಕಾಗುವುದಿಲ್ಲ. ಹೀಗಾಗಿ ಶಾಸಕ ಆನಂದಸಿಂಗ್ ಅವರ ಗಮನಕ್ಕೆ ತಂದು, ಅಗತ್ಯ ಅನುದಾನಕ್ಕಾಗಿ ಮನವಿ ಮಾಡಲಾಗುವುದು ಎಂದರು.

LEAVE A REPLY

Please enter your comment!
Please enter your name here