ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ..

0
222

ಬಳ್ಳಾರಿ/ಹೊಸಪೇಟೆ:ನಗರದ 32ನೇ ವಾರ್ಡಿನಲ್ಲಿ ಅಂದಾಜು 55 ಲಕ್ಷ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2017-18ನೇ ಸಾಲಿನ ಪರಿಶಿಷ್ಟ ಪಂಗಡದ ಯೋಜನೆಯಡಿ ನಿರ್ಮಿಸಲಾಗುತ್ತಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಆನಂದ್ ಸಿಂಗ್ ಇಂದು ಬೆಳಿಗ್ಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧರಾಗಿದ್ದೇನೆ. ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಎಲ್ಲಾ ಜಾತಿ, ಜನಾಂಗದವರ ಬೆಂಬಲ ಗಳಿಸಿದ್ದೇನೆ. ಮುಂದೆ ಕೂಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ನಾಗಲಕ್ಷ್ಮಮ್ಮ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ, ನಗರಸಭೆ ಸದಸ್ಯ ಗುಜ್ಜಲ ನಿಂಗಪ್ಪ, ಮಾಜಿ ಶಾಸಕ ರತನ್ ಸಿಂಗ್, ಮುಖಂಡರಾದ ಬೆಳಗೋಡು ರುದ್ರಪ್ಪ, ತಾರಿಹಳ್ಳಿ ಹುಲುಗಜ್ಜಪ್ಪ, ಕಂಪ್ಲಿ ಕಣಿಮೆಪ್ಪ, ಕಟಿಗಿ ಜಂಬಯ್ಯ ನಾಯಕ, ಗುಜ್ಜಲ ಕಣಿಮೆಪ್ಪ, ಗುಜ್ಜಲ ಚಂದ್ರೇಶೇಖರ್, ಗುಜ್ಜಲ ಉಮೇಶ, ಎಸ್.ಕೆ.ಮೂರ್ತೆಪ್ಪ, ಜಂಬಾನಳ್ಳಿ ಸತ್ಯನಾರಾಯಣ, ಡಿ.ಎಂ.ಶಶಿಧರಯ್ಯ, ಧರ್ಮೇಂದ್ರ ಸಿಂಗ್ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕಿಶೋರ್ ಕುಮಾರ್,. ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here