ಕಾಮಗಾರಿ ವಿಳಂಬ ಸ್ಥಳೀಯರಿಂದ ಧರಣಿ

0
402

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಹೈವೇ ರಸ್ತೆ ಕಾಮಗಾರಿ ವಿಳಂಬ. ಉಪ್ಪರಪೇಟೆ ಗ್ರಾಮಸ್ಥರ ರಿಂದ ರಸ್ತೆ ಯಲ್ಲಿ ಧರಣಿ.

ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ವರೆಗೂ ಹೈವೇ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಚಿಂತಾಮಣಿ ಕ್ಷೇತ್ರದ ಶಾಸಕ ಎಂ ಕೃಷ್ಣಾರೆಡ್ಡಿ ಮತ್ತು ಲೋಕಸಭಾ ಸದಸ್ಯ ಕೆ.ಎಚ್ ಮುನಿಯಪ್ಪ ,ಚಿಂತಾಮಣಿ ಮಾಜಿ ಶಾಸಕ ಎಂ.ಸಿ ಸುಧಾಕರ ರವರಿಗೆ ಗ್ರಾಮಸ್ಥರು ರಸ್ತೆ ಕಾಮಗಾರಿ ವಿಲಂಬದ ಬಗ್ಗೆ ದೂರು ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಉಪ್ಪರಪೇಟೆ ಗ್ರಾಮಸ್ಥರು ರಸ್ತೆ ಯಲ್ಲಿ ಧರಣಿ ಮಾಡಿದರು.

ಗ್ರಾಮಕ್ಕೆ ಹೋಗಬೇಕಾದ್ದರೆ ರಸ್ತೆ ಎತ್ತರಕ್ಕಿದ್ದೂ ರಸ್ತೆ ಬದಿ ಐದು ಅಡಿಗೂ ಹೆಚ್ಚಿಗೆ ಆಗೆದಿರುವುದ ರಿಂದ ಗ್ರಾಮಸ್ಥರಿಗೆ ರಸ್ತೆಬದಿ ಸಂಚರಿಸಲು ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಗ್ರಾಮ ಪಂಚಾಯತಿ ಸದ್ಯಸ ಎಂ. ಷಾಕೀರ್ ಮತ್ತು ಗ್ರಾಮಸ್ಥರು ರಸ್ತೆ ತಡೆ ಮಾಡಿ ಧರಣಿ ಮಾಡಿಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕಾಮಗಾರಿಯನ್ನು ಚುರುಕುಗೊಳಿಸಿ ಪೂರ್ಣಗೊಳಿಸಿ ಸ್ಥಳೀಯರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here