ಕಾಮಾಗಾರಿ ವೇಳೆ ದುರಂತ,ಇಬ್ಬರು ಸಾವು.

0
138

ಬೆಂಗಳೂರು/ಮಹದೇವಪುರ:-ತರಾತುರಿಯಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷಿ ಯೋಜನೆಯಾದ ಕೆಸಿ ವ್ಯಾಲಿ ( ಕೊರಮಂಗಲ ಛಲಘಟ್ಟ) ಕೆರೆ ನೀರು ಶುದ್ದೀಕರಣ ಘಟಕದ ನೀರನ್ನು ಬರ ಪೀಡಿತ ಕೋಲಾರ ಜಿಲ್ಲೆಯ ಕೆರೆಗಳಿಗೆ ಹಾಯಿಸಲು ನಡೆಯುತ್ತಿರುವ ಬೃಹತ್ ಪೈಪ್ ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ಓರ್ವ ಇಂಜಿನೀಯರ್ ಗಂಭಿರವಾಗಿ ಗಾಯಗೊಂಡಿರುವ ಘಟನೆ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯ ಸಮೀಪ ಕೈತೋಟ ಎಂಬಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸಂದೀಪ್(21) ಹಾಗೂ ಅಖಿಲೇಷ್(20) ಮೃತ ದುರ್ದೈವಿಗಳು.ಆಂದ್ರ ಪ್ರದೇಶದ ಇಂಜಿನಿಯರ್ ಉಮಾಶಂಕರ್ ಎಂಬಾತ ಗಂಭಿರ ಗಾಯಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 12 ಗಂಟೆ ಸುಮಾರಿಗೆ ಇಮ್ಮಡಿಹಳ್ಳಿ ಸಮೀಪದ ಕೈತೋಟ ಎಂಬಲ್ಲಿ ಕೆಸಿ ವ್ಯಾಲಿ ಕಾಮಗಾರಿ ನಡೆಯುತ್ತಿತ್ತು. ಜೆಸಿಬಿಗಳ ಮೂಲಕ ಮಣ್ಣನ್ನು ಹೊರಹಾಕುತ್ತಿದ್ದರು. 10ಕ್ಕೂ ಹೆಚ್ಚು ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದರು.ಪೈಪ್ ಗಳನ್ನು ವೆಲ್ಡಿಂಗ್ ಮಾಡುತ್ತಿದ್ದ ಸಂದೀಪ್ ಹಾಗೂ ಗ್ರೈಂಡಿಂಗ್ ಮಾಡುತ್ತಿದ್ದ ಅಖಿಲೇಷ್ ಮತ್ತು ಇಂಜಿನಿಯರ್ ಉಮಾಶಂಕರ್ ಮೇಲೆ ಅಕ್ಕಪಕ್ಕದಲ್ಲಿದ್ದ ಮಣ್ಣಿನ ದಿಬ್ಬ ಏಕಾಏಕಿಯಾಗಿ ಕುಸಿದು ಬಿದ್ದಿದೆ. ಅಷ್ಟರಲ್ಲಾಗಲೇ ಸ್ಥಳೀಯರು ನೆರವಿಗೆ ಬಂದು ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ, ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಎಲ್ಲಿ ಏನಾಗುತ್ತಿದೆ ಎನ್ನುವಷ್ಟರಲ್ಲಿ ಮಣ್ಣು ಮೇಲೆ ಬಿದ್ದಿದೆ, ಸ್ಥಳದಲ್ಲಿ ಇನ್ನೂ 6ಜನ ಕೆಲಸ ಮಾಡುತ್ತಿದ್ದರು, ಅವರು ಬೃಹತ್ ಪೈಪ್ ನ ಒಳಗೆ ಇದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಭಾನುವಾರ ರಜಾ ಇದ್ದಿದ್ದರಿಂದ ಜಾಸ್ತಿ ಕಾರ್ಮಿಕರು ಬಂದಿರಲಿಲ್ಲ, ಇಲ್ಲವಾದರೇ ಇನ್ನಷ್ಟು ಪ್ರಾಣ ಹಾನಿಯಾಗುವ ಸಾದ್ಯತೆ ಇತ್ತು. ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳೀಯರು ಕೂಡಾ ಮಣ್ಣಿನಿಂದ ಹೊರತೆಗೆಯಲು ಸಹಾಯ ಮಾಡಿದ್ದಾರೆಂದು ಕಾರ್ಮಿಕ ನೊಬ್ಬ ಅಳಲುತೋಡಿಕೊಂಡ.

ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮೊದಲು ಈ ಯೋಜನೆ ಲೋಕಾರ್ಪಣೆ ಮಾಡುವ ಹುರುಪಿನಲ್ಲಿ ಕಾಮಗಾರಿ ಅತಿ ವೇಗವಾಗಿ ನಡೆಸಲಾಗುತ್ತಿದ್ದು ರಾತ್ರಿ ಹಗಲೆನ್ನದೆ ಕಾಂಗಾರಿ ನಡೆಸುತ್ತಿರುವುದು ಈ ಅವಘಡಗಳಿಗೆ ಕಾರಣವಾಗಿದೆ,
ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಊರುಗಳಿಂದ ಬಂದವರು ಅಜಾಗರೂಕತೆಯಿಂದ ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿರುವುದು ದುರಂತವೇ ಸರಿ.
ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ಘಟನಾ ಸ್ಥಳವನ್ನು ಪರಿಶೀಲನೆ ಮಾಡಿದರು.

LEAVE A REPLY

Please enter your comment!
Please enter your name here