ಕಾರು, ಕ್ರೋಜರ್ ಡಿಕ್ಕಿ: ಇಬ್ಬರ ಸಾವು

0
178

ಬೀದರ್/ಬಸವಕಲ್ಯಾಣ: ಕಾರು ಮತ್ತು ಕ್ರೋಜರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮುಖ್ಯಗುರು ಸೇರಿ ಇಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 9ರ ಮೇಲಿರುವ ತಾಲೂಕಿನ ತಡೋಳಾ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ.

ನಗರದ ತ್ರಿಪುರಾಂತ ನಿವಾಸಿ, ತಾಲೂಕಿನ ತಡೋಳಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಗುರು ದೇವಿಂದ್ರಪ್ಪ ಮೋರಖಂಡೆ (52) ಹಾಗೂ ತ್ರಿಪುರಾಂತ ನಿವಾಸಿ, ನಿವೃತ್ತ ಶಿಕ್ಷಕ ರಾಮಣ್ಣ ಚಂದ್ರಪ್ಪ ಬೋಕ್ಕೆ (62) ಮೃತ ದುರ್ದೈವಿಗಳು. ಅಲ್ಟೊ ಕಾರಿನಲ್ಲಿ ತಡೋಳಾದಿಂದ ಬಸವಕಲ್ಯಾಣಕ್ಕೆ ಬರುವ ಮಾರ್ಗ ಮಧ್ಯೆ ಭವಾನಿ ಮಂದಿರ ಬಳಿ ಎದುರಿಗೆ ಬಂದ ಕ್ರೋಜರ್ ವಾಹನ ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
ಪಿಎಸ್ಐ ತುಕಾರಾಮ ಹೊಸ್ಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here