ಕಾರ್ಮಿಕರ ಅನಿರ್ಧಿಷ್ಟಾವದಿ ಪ್ರತಿಭಟನೆ

0
1257

ಬೆಂಗಳೂರು/ಮಹದೇವಪುರ:-ಪರ್ಮನೆಂಟ್ ಎಂಪ್ಲಾಯ್ಸ್ ಆಗುತ್ತೇವೆ ಎಂಬ ಕಾರಣಕ್ಕೆ ಕಡಿಮೆ ಸಂಭಳ ಇದ್ದರೂ, ಅಡ್ಜಸ್ಟ್ ಮಾಡಿಕೊಂಡು ಕಳೆದ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಇಂದು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಎಂದಿನಂತೆ ಸಮವಸ್ತ್ರದಲ್ಲಿ ಆಗಮಿಸಿದ್ದ ಕಾಮರ್ಿಕರಿಗೆ ಇದೊಂದು ಅಘಾತದ ಸುದ್ದಿ, ಈ ಸುದ್ದಿಯಿಂದ ರೊಚ್ಚಿಗೆದ್ದ ಕಾರ್ಮಿಕರು ಕಂಪನಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ಬೆಂಗಳೂರು ನಗರದ ಗರುಡಾಚಾರ್ಪಾಳ್ಯಾದ ಗ್ರಾಫೈಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಳಿಯ ಐಎಫ್ಬಿ ಆಟೋಮೋಬೈಲ್ಸ್ನ 258ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಇಂದು ಬೀದಿಪಾಲಾಗಿದ್ದಾರೆ. ಎಂದಿನಂತೆ ಕೆಲಸಕ್ಕೆ ಇಂದೂ ಸಹ ಬಂದಿದ್ದಾರೆ, ಆದರೆ ಸೆಕ್ಯೂರಿಸಿ ನಿಮ್ಮ ಕಾಂಟ್ರಾಕ್ಟ್ ಮುಗಿದಿದೆ ನಿಮ್ಮನ್ನು ಸಂಸ್ತೆಯೊಳಗೆ ಬಿಡ ಬೇಡಿ ಎಂದು ಆಡಲಿತ ಮಂಡಳಿ ಸೂಚನೆ ನಿಡಿದ್ದಾರೆ ಎಂದಿದ್ದಾರೆ, ಇದರಿಂದ ರೊಚ್ಚಿಗೆದ್ದ ಕಾಮರ್ಿಕರು ಎಐಟಿಯುಸಿ ಸಂಘಟನೆಯೊಂದಿಗೆ ಸೇರಿ ಅನಿರ್ಧಿಷ್ಟಾವದಿ ಪ್ರತಿಭಟನೆಗೆ ಮುಂದಾಗಿದೆ.

LEAVE A REPLY

Please enter your comment!
Please enter your name here