ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಅನುಮಾನ…!?

0
463

ಮಂಡ್ಯ/ಮಳವಳ್ಳಿ:ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಚಿತ್ರನಟ ಹಾಗೂ ನಿವೃತ್ತ ಆಯುಕ್ತ ಕೆ. ಶಿವರಾಂ ಪೂಜೆ ಸಲ್ಲಿಸಿ ಬೈಕ್ ಜಾಥ ಮೂಲಕ ಚಾಲನೆ ಬಿಜೆಪಿ ಪಕ್ಷದಲ್ಲಿ ಕಾಣಿಸಿಕೊಂಡಿರುವುದು ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಅನುಮಾನ ಮೂಡಿಸಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿರೋ ಕೆ.ಶಿವರಾಂ ಇಂದು ಬೆಳಗ್ಗೆ ಪಟ್ಟಣಕ್ಕೆ ಆಗಮಿಸಿ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು ನಂತರ ಬೈಕ್ ಜಾಥ ಪಟ್ಟಣದಲ್ಲಿ ನಡೆಸಿದರು . ನಂತರ ಸುದ್ದಿಗಾರರೊಂದಿಗೆ ಮಾತನಾಡಿ , ಕಾಂಗ್ರೇಸ್ ಪಕ್ಷದ ಆಡಳಿತ ದಲಿತ ವಿರೋಧಿನೀತಿ ಅನುಸರಿಸುತ್ತಿದೆ. ಕಳೆದ 70 ವರ್ಷದ ಆಡಳಿತದಲ್ಲಿ ದಲಿತರಿಗೆ ಯಾವ ಅಭಿವೃದ್ಧಿ ಗೆ ಕಾಳಜಿ ಮಾಡಿಲ್ಲ, ದಲಿತರನ್ನು ಮುಖ್ಯಮಂತ್ರಿ ಯನ್ನು ಏಕೆ ಮಾಡಲಿಲ್ಲ, ರಾಜ್ಯದಲ್ಲಿ ದಲಿತರು ಹೆಚ್ಚು ಸಂಖ್ಯೆಯಲ್ಲಿ ಇದ್ದರೂ ಅಧಿಕಾರ ನೀಡುವುದಲ್ಲಿ ಮೀನಾವೇಷ ನೋಡುತ್ತಿದೆ. ಅದಕ್ಕಾಗಿ ದಲಿತರ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ತಿಳಿಸಿದರು. ಪಕ್ಷವೂ ಎಲ್ಲಿ ಸ್ವರ್ಧೆ ಮಾಡಿ ಎಂದರೆ ಅಲ್ಲಿ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಎಸ್ಟಿ ಎಸಿ ಜಿಲ್ಲಾಧ್ಯಕ್ಷ ಕೆಂಪಬೋರಯ್ಯ, ಉಪಾಧ್ಯಕ್ಷೆ ಲಕ್ಷ್ಮಿ, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here