ಕಾರ್ಯಕರ್ತರ ಬೃಹತ್ ಸಮಾವೇಶ.

0
1603

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ಚುನಾವಣೆಯಲ್ಲಿ ಮತ ನೀಡಿದವರ ಋಣ ತೀರಿಸುವೆ, ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುವೆ ಎಂದು ಮೇಲೂರು ರವಿಕುಮಾರ್ ಜನತೆಗೆ ಬರವಸೆ ನೀಡಿದರು. ದಿಬ್ಬೂರಹಳ್ಳಿಯಲ್ಲಿ ಮೇಲೂರು ರವಿಕುಮಾರ್ ನೇತೃತ್ವದಲ್ಲಿ ಹೆಚ್.ಡಿ ದೇವೆಗೌಡ ಮತ್ತು ಜೈ ಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜೆಡಿಎಸ್ ಪಕ್ಷದ ನಿಷ್ಟಾವಂತ ಮುಖಂಡರ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮ.ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಸುಮಾರು 35000 ಸಾವಿರ ಜನರು ಭಾಗವಹಿದ್ದರು.ಕಾಂಗ್ರೆಸ್ ಪಕ್ಷವನ್ನು ತೊರೆದು ಪಿಎಲ್ ಡಿ ಬ್ಯಾಕ್ ಮಾಜಿ ಅದ್ಯಕ್ಷ ಚೀಮನಹಳ್ಳಿ ಗೋಪಾಲಣ್ಣ ಸೇರಿದಂತೆ ನೂರಾರು ಮುಖಂಡರು ರವಿ ಕುಮಾರ್ ಬಣಕ್ಕೆ ಸೇರ್ಪಡೆಯಾದರು.ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಕೂಲಿ ಕಾರ್ಮಿಕರಿಗೆ ಉಚಿತವಾಗಿ 220 ಸೈಕಲ್ ಗಳು ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು 200 ಅರ್ಹ ಅಂಗವಿಕಲರಿಗೆ ವೀಲ್ ಚೇರ್ ಗಳನ್ನು ವಿತರಣೆ ಮಾಡಿ ಮೇಲೂರು ರವಿಕುಮಾರ್ ಮಾತನಾಡಿ ಹಾಲಿ ಶಾಸಕ ಹೆಚ್.ಡಿ ದೇವೆಗೌಡರ ಮುಂದೆ ವಿಷದ ಬಾಟಲಿ ತೋರಿಸಿ ಟಿಕೇಟ್ ಕೊಡದಿದ್ದರೆ ಸಾಯುವೆನೆಂದು ಹೇಳಿ ಟಿಕೇಟ್ ಪಡೆದಿದ್ದಾರೆಂದು ಆರೋಪಿಸಿದರು.ಜೆಡಿಎಸ್ ಪಕ್ಷವನ್ನು ಹಾಳು ಮಾಡಿದ ಹಾಲಿ ಶಾಸಕ ಈ ಬಾರಿ ಗೆದ್ದರೆ ಈ ಕ್ಷೇತ್ರ ತೊರೆಯುವೆ ರವಿಕುಮಾರ್ ಖಡಕ್ ಸವಾಲ್.ಚುನಾವಣೆಯಲ್ಲಿ ಜನರಿಂದ ಹಣ ಮತ್ತು ಮತ ಪಡೆದು ಜನರನ್ನು ಮರೆತ ಶಾಸಕ ನನ್ನ ಮೊದಲ ವಿರೋಧಿ.ಈ ಕ್ಷೇತ್ರದ ಅಭಿವೃದ್ದಿಯ ಜೊತೆಗೆ ಜನರ ಅಭಿವೃದ್ದಿಯೇ ನನ್ನ ಮೊದಲ ಧ್ಯೇಯವಾಗಿದೆ ತಾವೆಲ್ಲರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸಹಕಾರ ನೀಡುವ ಮೂಲಕ ನನಗೆ ಈ ಬಾರಿ ಗೆಲ್ಲಲು ಅವಕಾಶ ಮಾಡಿಕೊಡಬೇಕೆಂದು ಮಾತನಾಡಿ ಮಾಜಿ ಸಚಿವ ಮತ್ತು ಹಾಲಿ ಶಾಸಕರ ಸುಳ್ಳು ಮಾತುಗಳನ್ನು ಮತದಾರರು ಈ ಬಾರಿ ನಂಬ ಬೇಡಿ ಎಂದು ಆರೋಪಿಸಿದರು. ಕಾರ್ಯಕ್ರಮದಲ್ಲಿ ಕೊಚಿಮೂಲ್ ನಿರ್ದೇಶಕ ಬಂಕ್ ಮುನಿಯಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜ ರಘು ಹಾಗೂ ಹಲವಾರು ಮುಖಂಡರು ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಉಪಾದ್ಯಕ್ಷ, ಹೆಚ್ ನರಸಿಂಹಯ್ಯ ಹಾಗೂ ನಗರಸಭೆ ಸದಸ್ಯರು ಸೇರಿದಂತೆ ಹಲವಾರು ಮುಖಂಡರು ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here