ಕಾರ್ಯಕರ್ತರ ಸಭೆ ಹಾಗೂ ಜೆಡಿಎಸ್ ತೊರೆದು ಸುಧಾಕರ ಬಣಕ್ಕೆ ಸೇರ್ಪಡೆ..

0
507

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕಿನ ಮುರುಗಮಲ್ಲ ಹೋಬಳಿಯ ಚಲಮಕೋಟೆ ಗ್ರಾಮಕ್ಕೆ ಭೇಟಿ ನೀಡಿದ ಸುಧಾಕರ್ ಅಲ್ಲಿನ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ತಮ್ಮ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು ಈ ಸಂದರ್ಭದಲ್ಲಿ ಚಲಮಕೋಟೆ ಗ್ರಾಮದ ಅಂಬೇಡ್ಕರ್ ಯುವ ಸೇನೆ ಯುವಕರು ಜೆಡಿಎಸ್ ತೊರೆದು ಸುಧಾಕರ ಬಣಕ್ಕೆ ಸೇರ್ಪಡೆಯಾದರು ಕಾರ್ಯಕ್ರಮಕ್ಕೆ ಹಾಜರಾಗುವುದಕ್ಕೂ ಮುನ್ನ ಗ್ರಾಮದಲ್ಲಿ ಸಂಚರಿಸಿದ ಅವರು ಜನರ ಕುಂದು ಕೊರತೆಗಳನ್ನು ಕೇಳಿ ತಿಳಿದುಕೊಂಡರು.ತಮ್ಮ ಅವಧಿಯಲ್ಲಿ ಅನುದಾನ ಕಡಿಮೆ ಇದ್ದರೂ ಗ್ರಾಮಗಳ ಅಗತ್ಯಗಳನ್ನು ಕಂಡುಕೊಂಡು ಕೆಲಸಗಳನ್ನು ಮಾಡಿಸುತ್ತಿದ್ದೆವು. ನಾವು ಅಂದು 20ರಿಂದ 25 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದ್ದಂತಹ ಅಭಿವೃದ್ಧಿ ಕೆಲಸಗಳಿಗೆ ಇಂದು ಈಗಿನ ಶಾಸಕರು ಕೇವಲ ಆರು ಲಕ್ಷ ರೂಪಾಯಿಗಳಂತೆ ವೆಚ್ಚ ಮಾಡುತ್ತಿದ್ದಾರೆ .ಆರು ಲಕ್ಷ ರೂಪಾಯಿಗಳಲ್ಲಿ ಏನು ಕೆಲಸಗಳಾಗುತ್ತವೆ ಎಂದು ಸುಧಾಕರ ಅವರು ಪ್ರಶ್ನಿಸಿದರು.ಈ ಗ್ರಾಮಕ್ಕೆ ಬಂದಾಗ ಕೆಲ ಯುವಕರು ನಾನು ಅಂದು ಆರಂಭಿಸಿದ ಕೆಲವು ಕೆಲಸಗಳನ್ನು ಹೊರತುಪಡಿಸಿ ಕೆಲವು ಕಾಮಗಾರಿಗಳು ಇನ್ನೂ ಅಪೂರ್ಣವಾಗಿಯೇ ಇರುವುದರ ಕುರಿತು ಗಮನ ಸೆಳೆದು ಬಂದ ಅನುದಾನಗಳಿಂದ ವ್ಯವಸ್ಥಿತವಾಗಿ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಿ ಅವುಗಳನ್ನು ಪೂರ್ಣಗೊಳಿಸುವ ಕಡೆ ಗಮನಹರಿಸಬೇಕು . ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಜೆಕೆ ಕೃಷ್ಣಾ ರೆಡ್ಡಿ ಅವರಿಗೆ ಪರೋಕ್ಷವಾಗಿ ಸಲಹೆ ನೀಡಿದರು.ನಾವು ಇಂದಿರಾ ಕ್ಯಾಂಟೀನ್ ಗೆ ವಿರೋಧ ಅಲ್ಲ,ಇಂದಿರಾ ಕ್ಯಾಂಟೀನ್ ಶಂಕುಸ್ಥಾಪನೆ ಪೂಜೆ ವೇಳೆ ಎಪಿಎಂಸಿ ಜಾಗ ಕೊಟ್ಟಿದ್ದು ನಾವೇ ಕೊಟ್ಟಿರುವಂತಹ ಅಧ್ಯಕ್ಷರಿಗೆ ಮಾಹಿತಿ ನೀಡದೆ ಪೂಜೆ ಮಾಡಲು ಬಂದ ಪೌರಯುಕ್ತರಿಗೆ ಮತ್ತು ಶಾಸಕರಿಗೆ ಕಾರ್ಯಕರ್ತರ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

LEAVE A REPLY

Please enter your comment!
Please enter your name here