ಕಾರ್ಯಕರ್ತರ ಸಮಾವೇಶ..

0
125

ಬೆಂಗಳೂರು/ಮಹದೇವಪುರ:ರಾಜ್ಯದ ಹಿತವನ್ನು ಕಾಪಾಡುವಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳೆರೆಡೂ ವಿಫಲವಾಗಿವೆ ಎಂದು ಜೆಡಿಎಸ್ ಪಕ್ಷದ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆರ್.ಪ್ರಕಾಶ್ ಹೇಳಿದರು.ಮಹದೇವಪುರ ಕ್ಷೇತ್ರದ ವೈಟ್ಫೀಲ್ಡ್ನಲ್ಲಿ ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರ ಸಮಾವೇಶ ಮತ್ತು ಸೇರ್ಪಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳೆರೆಡೂ ತಮ್ಮ ಆಡಳಿತವಧಿಯಲ್ಲಿ ಕೃಷಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬಂದಿವೆ, ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೇಸ್ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿವೆ, ಸರ್ಕಾರ ಕಚೇರಿಯ ಅಧಿಕಾರಿಗಳು ಮಂತ್ರಿಗಳ ಕೈಗೊಂಬೆಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ದ್ವಂದ್ವ ವರ್ತನೆಯಿಂದ ಬೇಸತ್ತಿರುವ ರಾಜ್ಯದ ಜನತೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಆಯ್ಕೆ ಮಾಡಿ ಕುಮಾರ ಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹದೇವಪುರ ಕ್ಷೇತ್ರವೂ ಸಹ ಅಭಿವೃದ್ಧಿಯಿಲ್ಲದೆ ಸೊರಗಿದೆ, ಜನ ಬದಲಾವಣೆ ಬಯಸುತ್ತಿದ್ದಾರೆ. ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ಹಾಕುವ ಮೂಲಕ ಕುಮಾರ ಸ್ವಾಮಿಯವರು ಉದ್ದೇಶಿಸಿರುವ ಸುವರ್ಣ ಕರ್ನಾಟಕದ ಕನಸನ್ನು ನನಸು ಮಾಡಿ ಎಂದರು.
ನಂತರ ಮಾತನಾಡಿದ ವಿಧಾನ ಸಭಾ ಅಭ್ಯರ್ಥಿ ಆಕಾಂಕ್ಷಿ ಸಿ.ಆರ್.ನಟರಾಜ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಯಾರೆಂದು ಗೊಂದಲಗಳಿದ್ದು, ಈಗಾಗಲೇ ವರಿಷ್ಠರೊಂದಿಗೆ ಚರ್ಚಿಸಲಾಗಿದೆ, ರಾಜ್ಯದ ಜನತೆ ರಾಷ್ಟ್ರೀಯ ಪಕ್ಷಗಳೆರಡನ್ನೂ ತಿರಸ್ಕರಿಸಿ ಜನತಾದಳವನ್ನು ತಮ್ಮ ಸೇವೆಗೆ ಆಯ್ದುಕೊಳ್ಳಲಿದ್ದಾರೆ, ಐಟಿಬಿಟಿ ಮತ್ತು ಹಳ್ಳಿ ಸೊಗಡುಳ್ಳ ಮಹದೇವಪುರ ಕ್ಷೇತ್ರ ಮೂಲಭೂತ ಸೌಲಭ್ಯವಿಲ್ಲದೆ ಹಿಂದುಳಿಯುತ್ತಿದೆ, ಅತಿ ಹೆಚ್ಚು ಆರ್ಥಿಕ ಚಟುವಟಿಕೆಗಳು ನಡಯುವ ಕ್ಷೇತ್ರ ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದಬೇಕಿದೆ ಕ್ಷೇತ್ರದ ಸಮಸ್ಯೆಗಳು, ಪ್ರಾದೇಶಿಕತೆಯನ್ನು ಅರಿತಿರುವ ನನ್ನನ್ನು ಮುಂಬರುವ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ವಿಧಾನ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಪಥಾಕೆ ಹಾರಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು.
ಇದೆ ವೇಳೆ ಅನ್ಯ ಪಕ್ಷಗಳಿಂದ ನೂರಾರು ಕಾರ್ಯಕರ್ತರನ್ನು ಜೆಡಿಎಸ್ಗೆ ಸೇರ್ಪಡಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗೋರ್ವದನ್, ರಮೇಶ್, ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here