ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ

0
109

ಬೆಂಗಳೂರು/ ಮಹದೇವಪುರ:- ನೂರು ಸುಳ್ಳುಗಳು ಹೇಳಿ ನಿಜ ಮಾಡಲು ಬಿಜೆಪಿ ನಾಯಕರು ಹೊರಟಿದ್ದಾರೆಂದು ಗರುಡಾಚಾರ್ ಪಾಳ್ಯ ಪಾಲಿಕೆ ಸದಸ್ಯ ನಿತೀಶ್ ಪುರುಷೋತ್ತಮ್ ಕಿಡಿಕಾರಿದರು.
ಗರುಡಾಚಾರ್ ಪಾಳ್ಯ ವಾರ್ಡಿನಲ್ಲಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಶಾಸಕರು ಯಾವುದೇ ಅಭಿವೃದ್ಧಿ ಮಾಡಿಲ್ಲ ೧೦ವರ್ಷ ಅಭಿವೃದ್ಧಿ ಕಾಣದೆ ಮಹದೇವಪುರ ಕ್ಷೇತ್ರ ಸಮಸ್ಯೆ ಗಳ ಅಗರವಾಗಿದೆ ಎಂದು ದೂರಿದರು.
ನಮ್ಮ ಕಾಂಗ್ರೆಸ್ ಸರ್ಕಾರ ೧೬೫ ಭರವಸೆ ಗಳನ್ನು ಇಡೇರಿಸುವ ಮೂಲಕ ರಾಜ್ಯದ ಹಿತ ಕಾಪಡಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕ್ಷೇತ್ರದ ಕಾಂಗ್ರೆಸ್ ಎಂ.ಎಲ್.ಎ ಅಭ್ಯರ್ಥಿ ಎಸಿ.ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದರು.
ಈ ವೇಳೆ ಗರುಡಾಚಾರ್ ಪಾಳ್ಯಾ ಸತೀಶ್ ಪಾಟಿಲ್ ಹಾಗೂ ಅವರ ನೂರಾರು ಸಂಗಡಿಗರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ಯಾದರು.
ಈ ಸಂದರ್ಭದಲ್ಲಿ ಎ.ಸಿ.ಹರಿಪ್ರಸಾದ್, ಜಿ.ಪಂ.ಸದಸ್ಯ ಕೆಂಪರಾಜ್, ಗರುಡಾಚಾರ್ ಪಾಳ್ಯ ವಾರ್ಡ್‌ ಅದ್ಯಕ್ಷ ಎಲ್ಲಪ್ಪ, ಮುಖಂಡರು ಚಿಕ್ಕ ಮುನಿಯಪ್ಪ, ಲಕ್ಷ್ಮಿ ನಾರಾಯಣ, ಬಾಬು, ಭೂ ನ್ಯಾಯ ಮಂಡಳಿ ಸದಸ್ಯ ರಾಮಾಂಜಿನಪ್ಪ, ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಇನ್ನಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here