ಕಾಲುವೆಗಳಿಗೆ 2 ಟಿಎಂಸಿ ನೀರು ಹರಿಸಿ…

0
191

ಬಳ್ಳಾರಿ/ಹೊಸಪೇಟೆ:ತುಂಗಭದ್ರಾ ಜಲಾಶಯ ನಿರ್ಮಾಣದ ಪೂರ್ವದಲ್ಲಿರುವ ಪುರಾತನ ವಿಜಯನಗರ ಕಾಲುವೆಗಳಾದ ರಾಯ-ಬಸವ ಕಾಲುವೆಗಳಿಗೆ ಬಚಾವತ್ ಆದೇಶದನ್ವಯ ವರ್ಷದ 11 ತಿಂಗಳು ನೀರು ಹರಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಗೋಸಲ ಭರ್ಮದಪ್ಪ ಹೇಳಿದರು. 

ರೈತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಬೆಂಗಳೂರು ವಿಕಾಸ ಸೌಧದಲ್ಲಿ ಇತ್ತೀಚಿಗೆ ಜರಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿಜಯನಗರ ಕಾಲುವೆಗಳಿಗೆ 96 ದಿನಗಳ ಕಾಲ ಪ್ರತಿದಿನ 200ಕ್ಯೂಸೆಕ್ಸ್ ನೀರು ಹರಿಸಲು ತೆಗೆದುಕೊಂಡ ನಿರ್ಣಯ ಕೈಬಿಟ್ಟು 120 ದಿನಗಳ ಕಾಲ 2ಟಿ.ಎಂ.ಸಿ. ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ ನಾಲ್ಕು ವರ್ಷದಿಂದ ಮಳೆಯಿಲ್ಲದೇ ಜಲಾಶಯದಲ್ಲಿ ನೀರು ಸಂಗ್ರಹ ಕ್ಷೀಣವಾಗಿ, ನೀರು ಹರಿ ಬಿಡದ ಪರಿಣಾಮವಾಗಿ ವಿಜಯನಗರ ಕಾಲುವೆ ವ್ಯಾಪ್ತಿಯ ರೈತರ ಭೂಮಿಗಳಿಗೆ ಸಮರ್ಪಕ ನೀರು ಇಲ್ಲದಂತಾಗಿದೆ. ಇದರಿಂದಾಗಿ ಬೆಳೆಗಳು ಹಾಳಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನು 4 ತಿಂಗಳಕಾಲ ಭೂಮಿಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ರೈತರು ತೀವ್ರ ಸಂಕಷ್ಠಕ್ಕೆ ಗುರಿಯಾಗಬೇಕಾತ್ತದೆ. 120 ದಿನಗಳ ಕಾಲ 2ಟಿ.ಎಂ.ಸಿ. ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಬಿ.ಸತ್ಯನಾರಾಯಣ.ತಾರಿಹಳ್ಳಿ ಹುಲುಗಜ್ಜಪ್ಪ. ಅರಳಿ ಕೋಟ್ರಪ್ಪ. ಬಿ.ಜಿ.ತಿರುಮಲ. ಆನಂದ್, ಕಿಚಡಿ ಲಕ್ಷ್ಮಣ. ನಾಣಿಕೆರಿ ತಿಮ್ಮಯ್ಯ. ಬಂಡೆರಂಗಪ್ಪ. ಡೊಮ್ಮಿ ಹನುಮಂತಪ್ಪ. ಆರ್.ಕೋಟ್ರೇಶ್ ಬಿ.ಹನುಮಂತಪ್ಪ ಇತರರು ಇದ್ದರು.

LEAVE A REPLY

Please enter your comment!
Please enter your name here