ನೀರು ಬಿಡದಿದ್ದರೆ ಉತ್ಸವಕ್ಕೆ ಅಡ್ಡಿ..?

0
234

ಬಳ್ಳಾರಿ /ಬಳ್ಳಾರಿ:ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ತುಸು ಹೆಚ್ಚು ನೀರು ಸಂಗ್ರಹಣೆಗೊಂಡಿದೆ. ಕರ್ನಾಟಕದ ಪಾಲಿನ ನೀರು ಮಳೆಯಿಂದಾಗಿ ರೈತರಿಗೆ ಜಲಾಶಯದಲ್ಲಿ ಸಂಗ್ರಹಿಸಿಕೊಳ್ಳಬೇಕು. ಅಗತ್ಯ ಬಿದ್ದಾಗ ರೈತರಿಗೆ ಪೂರೈಕೆ ಮಾಡಬೇಕು. ಇಲ್ಲದೇ ಹೋದರೆ ಹಂಪಿ ಉತ್ಸವದ ವೇಳೆ ರೈತರು ತಮ್ಮ ಕುಟುಂಬ ಸಮೇತ ಲಬೋ ಲಬೋ ಹೊಯ್ದುಕೊಂಡು ಉತ್ಸವಕ್ಕೆ ಅಡ್ಡಿಪಡಿಸುವುದಾಗಿ ತುಂಗಭದ್ರ ರೈತ ಸಂಘ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಎಚ್ಚರಿಕೆ ನೀಡಿದ್ದಾರೆ.

ಸಚಿವ ಸಂತೋಷ್ ಲಾಡ್ ರೈತರನ್ನು ಕಡೆಗಣಿಸುತ್ತಿದ್ದಾರೆ. ಅನ್ನ ಹಾಕುವ ರೈತರು ಸಚಿವರಲ್ಲಿ ತಮ್ಮ ತೊಂದರೆಗಳನ್ನು ಹಂಚಿಕೊಳಲು ಹೋದರೆ ವಿನಾಕಾರಣ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್‍ಎಲ್‍ಸಿ ಕಾಲುವೆಗೆ ಪ್ರತಿ ತಿಂಗಳು 20 ರಿಂದ 30ರ ವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಲು ಹಾಗೂ ಹೆಚ್‍ಎಲ್‍ಸಿ ಕಾಲುವೆಗೆ ಪ್ರತಿ ತಿಂಗಳು 25ರಿಂದ 5ರವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಕಳೆದ ವರ್ಷ 87 ಟಿಎಂಸಿ ನೀರು ಬಳಕೆಯಾಗಿತ್ತು. ಈ ವರ್ಷ 20 ಟಿಎಂಸಿ ನೀರು ಕಾಲುವೆಗಳ ಮೂಲಕ ಬಿಡಲಾಗಿದೆ.

ಜಲಾಶಯದಲ್ಲಿ 71 ಟಿಎಂಸಿ ನೀರು ಶೇಖರಣೆಯಾಗಿದೆ. ಜಲಾಶಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಕಾರಣ ನೀರಾವರಿ ಅಧಿಕಾರಿಗಳಿಗೆ ತಿಳಿಸಿ ಹೆಚ್‍ಎಲ್‍ಸಿ ಹಾಗೂ ಎಲ್‍ಎಲ್‍ಸಿ ಕಾಲುವೆಗಳಿಗೆ 6 ದಿನಗಳ ಕಾಲ ಕಡಿಮೆ ನೀರು ಪಡೆಯಲಾಗಿದೆ. ಇತ್ತೀಚೆಗೆ ಬಿಸಿಲು, ಗಾಳಿ ಹೆಚ್ಚಿದ್ದರಿಂದ ಮತ್ತೆ ರೈತರ ಬೆಳೆಗಳಿಗೆ ತೊಂದರೆಯಾಗವ ಸಾಧ್ಯತೆ ಇದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ರೈತರಿಗೆ ನಷ್ಟವಾಗಲಿದೆ. ನೀರನ್ನು ಕಾಲುವೆಗಳಿಗೆ 10 ದಿನಗಳ ಕಾಲ ಕಡಿತಗೊಳಿಸುವ ಬದಲು 5 ದಿನಗಳಿಗೆ ಕಡಿತಗೊಳಿಸಬೇಕು. ಅಥವಾ 10 ದಿನಗಳ ಕಾಲ ಉಪ ಕಾಲುವೆಗಳಿಗೆ ಅರ್ಧ ಪಾಲಿನ ನೀರನ್ನು ಪೂರೈಸಬೇಕೆಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಗಂಗಾವತಿ ವೀರೇಶ, ಕುಡಿತಿನಿ ಪಂಪಾಪತಿ, ಡಿ.ಶಿವಯ್ಯ, ರಂಜಾನ್ ಸಾಬ್ ಮೃತ್ಯುಂಜಯ, ಶರಣಪ್ಪ, ಮಲ್ಲಪ್ಪ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here