ಕಾಲುವೆಯ ದುರಸ್ಥಿ ಕಾರ್ಯ ದಿನದಿಂದ ದಿನಕ್ಕೆ ಭರದಿಂದ ಸಾಗಿಗುತ್ತಿದೆ.

0
159

ಬಳ್ಳಾರಿ /ಹೊಸಪೇಟೆ : ತಾಲೂಕಿನ ಟಿಬಿ ಬೋರ್ಡ್ ವ್ಯಾಪ್ತಿಯ ಎಚ್‍ಎಲ್‍ಸಿ ಕಾಲುವೆಯ ದುರಸ್ಥಿ ಕಾರ್ಯ ದಿನದಿಂದ ದಿನಕ್ಕೆ ಭರದಿಂದ ಸಾಗಿದೆ. ನೆರೆಯ ಆಂದ್ರ ಪ್ರದೇಶಕ್ಕೆ ನೀರು ಸರಬರಾಜು ಕಲ್ಪಿಸುವ ಈ ಕಾಲುವೇ ಬಹಳ ವರ್ಷಗಳಿಂದ ದುರಸ್ಥಿ ಕಾಣದೆ ದಂಡೆಗಳು ದುರ್ಬಲವಾಗಿದ್ದವು. ಅಲ್ಲಲ್ಲಿ ಸೋರಿಕೆ ನೀರಿನಿಂದ ಬಹಳಷ್ಟು ಸ್ಥಳೀಯ ರೈತರು ಕೃಷಿ ಚಟುವಟಿಕೆಗಳನ್ನು ಸಾಗಿಸುತ್ತಾ ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚಿಗೆ ಕಾಲುವೆಯ ದುರಸ್ಥಿ ಕಾರ್ಯಕ್ಕೆ ಕೈ ಹಾಕಿದ ಟಿ.ಬಿ ಬೋರ್ಡ್ ಬೃಹತ್ ಯಂತ್ರಗಳನ್ನು ಬಳಸಿ ಸೇತುವೆಗಳು, ಕಾಲುವೆಯ ದಂಡೆಗಳಿಗೆ ಕಾಂಕ್ರೀಟ್ ಹಾಕಿಸುತ್ತಿದ್ದಾರೆ. ಇದರಿಂದ ನೀರು ಸೋರಿಕೆ ಕಡಿಮೆಯಾಗಿ ಎಲ್ಲಾರಿಗು ಸರಿಯಾಗಿ ಸರಬರಾಜು ಮಾಡಲು ಅನುಕೂಲವಾಗುವುದು ಎಂದು ಟಿ.ಬಿ ಬೋರ್ಡ್ ಅಧಿಕಾರಿ ರಂಗಾರೆಡ್ಡಿ ಅಭಿಪ್ರಾಯ ಮಂಡಿಸಿದ್ದಾರೆ. ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಕಾಲುವೆ ಸೇರಿದಂತೆ ಪಾಪಿನಾಯಕನ ಹಳ್ಳಿ, ಕೆರೆತಾಂಡ ಮುಂತಾದ ಕಡೆ ಸೇತುವೆಗಳು ತೀರ ದುರ್ಬಲ ಇರುವುದರಿಂದ ಕಾಲುವೆಯ ದಡದಲ್ಲಿ ಬೃಹತ್ ಗರಸು ಮಣ್ಣನ್ನು ಹಾಕಲಾಗಿದೆ. ಅಲ್ಲದೆ ಕಾಲುವೆಯ ಎರಡು ಬದಿಯಲ್ಲಿ ಈ ಮೊದಲು ಇದ್ದ ಸೈಜ್ ಕಲ್ಲುಗಳನ್ನು ತೆಗೆದು ಕಾಂಕ್ರೀಟ್ ಹಾಕಿರುವುದರಿಂದ ನೀರು ಅತ್ಯಂತ ಸರಗವಾಗಿ ಹರಿಯಲು ಅನುಕೂಲವಾಗಿದೆ. ಒಟ್ಟಾರೆ ಕಾಲುವೆಯ ದುರಸ್ಥಿ ಕಾರ್ಯ ಹಲವರಿಗೆ ಸಿಹಿಯಾದರೆ ಕೆಲವರಿಗೆ ಕಹಿಯಾಗಿ ಮಾರ್ಪಟ್ಟಿದೆ.

LEAVE A REPLY

Please enter your comment!
Please enter your name here