ಕಾಲುವೆ ನೀರು ಪೋಲು..?

0
155

ವಿಜಯಪುರ/ಸಿಂದಗಿ:ಕೆಬಿಜೆಎನ್ ಎಲ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಲುವೆ ಒಡೆದು ಪಟ್ಟಣಕ್ಕೆ ಕಾಲುವೆ ನೀರು ನುಗ್ಗಿದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ನಡೆದಿದೆ. ಕೃಷ್ಣಾ ಭಾಗ್ಯ ಜಲ ನಿಗಮದ 16ನೇ ವಿತರಣಾ ಕಾಲುವೆ ಒಡೆದು ಈ ಅವಾಂತರ ಸೃಷ್ಟಿಯಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಈ ಕಾಲುವೆ ಒಡೆದಿತ್ತು. ಪ್ರತಿಬಾರಿ ಕಾಲುವೆಗೆ ನೀರು ಹರಿಸಿದಾಗೆಲ್ಲ ಸಮಸ್ಸೆ ಎದುರಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಈ ಕುರಿತು KBJNL ಆಧಿಕಾರಿಗಳಿಗೆ ತಿಳಿಸಿದ್ರೂ ಪ್ರಯೋಜನವಾಗಿಲ್ಲ. ಇನ್ನು ಆಲಮೇಲ ಪಟ್ಟಣದ ಬಸವನಗರ ಬಡಾವಣೆಯ ರಸ್ತೆಗಳಗೆ ನುಗ್ಗಿದ ಕಾಲುವೆ ನೀರು, ಬಸವ ನಗರದಲ್ಲಿರುವ ಮನೆಗಳ ಕಂಪೌಂಡ್ ಹಾಗೂ ರಸ್ತೆ ಸಂಪೂರ್ಣ ಜಲಾವೃತವಾಗಿವೆ. ರಸ್ತೆ ಜಲಾವೃತ ಆಗಿದ್ದರಿಂದ ಸಂಚಾರ ಅಸ್ತವ್ಯಸ್ಥವಾಗಿದ್ದು, ವೃದ್ಧರು ಹಾಗೂ ಮಕ್ಕಳು ತಿರುಗಾಡಲಾಗದೆ ಪರದಾಡುವಂತಾಗಿದೆ.

ನಮ್ಮೂರು ಟಿವಿ ನಂದೀಶ
ಹಿರೇಮಠ ಸಿಂದಗಿ.

LEAVE A REPLY

Please enter your comment!
Please enter your name here