“ಕಾಲ್” ಚಿತ್ರ ಮಹೂರ್ತ ಸಮಾರಂಭ

0
204

ಬಳ್ಳಾರಿ /ಹೊಸಪೇಟೆ:ಆಧುನಿಕತೆ ತಂತ್ರಜ್ಞಾನಕ್ಕೆ ಮಾರು ಹೋಗಿರುವ ವಿದ್ಯಾರ್ಥಿ-ಯುವಜನತೆ ಇತ್ತೀಚಿನ ದಿನಮಾನದಲ್ಲಿ ಸಿನಿಮಾ ಲೋಕದ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಹೊಸಪೇಟೆ ನಗರದ ಯುವಕರ ತಂಡ, ಕಾಲ ಎಂಬ ಕನ್ನಡ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕಳೆದ ಏ.23ರಂದು ಜರುಗಿದ ಚಿತ್ರದ ಮಹೂರ್ತ ಸಮಾರಂಭದಲ್ಲಿ ಸ್ಥಳೀಯ ಮುಖಂಡ ಪತಂರ್ ಜಯಂತ್, ಆ್ಯಕ್ಷನ್ ಕಟ್ ಹೇಳಿದರು. ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ವೀರ ಬಸವ ಸಾಲಿ, ಸ್ಥಳೀಯ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್, ಟಿಂಕರ್ ರಫೀಕ್ ಹಾಗೂ ರಾಹುಲ್ ಪೀಸೆ, ಗಣ್ಯರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಗರದ ರಾಘವೇಂದ್ರ ಎಂ. ಬರೆದು, ಸಿದ್ಧ ಪಡಿಸಿರುವ ಕತೆಗೆ ಅಕ್ಬರ್ ಖಾನ್, ಸಂಭಾಷಣೆ, ಚಿತ್ರಕತೆ ಹಾಗೂ ನಿರ್ದೇಶನ, ಸ್ಕ್ರೀನ್‌ಪ್ಲೇ, ಡೈಲಾಗ್ ಹಾಗೂ ಸಂಗೀತ ಪಂಚಮ್ ಜೀವ ಹಾಗೂ ಸುನೀಲ್ ಕುಮಾರ ನಿರ್ವಹಣೆ ಮಾಡಲಿದ್ದಾರೆ. ಕ್ಯಾಮಾರ ಮ್ಯಾನ್ ಅಮರ್ ಗೋಪಿ. ಚಿತ್ರದ ನಾಯಕ ನಗರದ ಸುನೀಲ್ ಗೌಡ, ನಾಯಕಿಯರಾಗಿ ಬೆಂಗಳೂರಿನ ಚಿತ್ರ ಹಾಗೂ ಅನುಷಾ, ಖಳ ನಾಯಕ ಮೈಸೂರಿನ ಜಾನ್‌ಧೀರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ 100ಕ್ಕೂ ಆಧಿಕ ಮಂದಿ ಕಲಾವಿದರು, ಅಭಿನಯಿಸಲಿದ್ದಾರೆ. ಸದ್ಯದಲ್ಲಿಯೇ ಹೊಸಪೇಟೆ, ಸಂಡೂರು, ಬಳ್ಳಾರಿ, ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಚತ್ರೀಕರಣ ನಡೆಯಲಿದೆ. ಚಿತ್ರತಂಡ ಅಂದುಕೊಂಡಂತೆ 6 ತಿಂಗಳಲ್ಲಿ ಚಿತೀಕರಣ ಪೂರ್ಣಗೊಳಿಸಿ, ಚಿತ್ರ ತೆರೆ ಕಾಣಲಿದೆ. ಇದೊಂದು ಕುಟುಂಬ ಆಧಾರಿತ ಚಿತ್ರವಾಗಿದ್ದು, ಮನೆ ಮಂದಿಯಲ್ಲ ಕುಳಿತು ಕೊಂಡು ನೋಡಬಹುದಾಗಿದೆ. ಕನ್ನಡ ಪ್ರೇಕ್ಷಕರು, ಪ್ರೋತ್ಸಹಿಸಿ, ಆರ್ಶಿವಾದಿಸಬೇಕು ಎಂದು ಚಿತ್ರದ ನಾಯಕ ನಟ ಸುನೀಲ್ ಗೌಡ ಹಾಗೂ ನಿರ್ದೇಶಕ ಅಕ್ಬರ್ ಖಾನ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here