“ಕಾಲ” ಚಿತ್ರ ಪ್ರದರ್ಶನ ರದ್ದು..

0
82

ರಾಯಚೂರು:ರಾಜ್ಯಾದ್ಯಂತ ವಾಗಿ ಪ್ರದರ್ಶನಗೊಳ್ಳುತ್ತಿರುವ ರಜನಿಕಾಂತ್ ನಟಿಸಿರುವ ಕಾಲಾ ಚಿತ್ರ ಪ್ರದರ್ಶನ ಪ್ರದರ್ಶನಗೊಂಡ ವೇಳೆ ಕಾರ್ಯಕರ್ತರು ದಿಡೀರನೆ ಗಲಾಟೆ ನಡೆಸಿ ಪೋಸ್ಟರ್ಗಳಿಗೆ ಕಪ್ಪು ಮಸಿ ಬಳಿದು ಪೋಸ್ಟರ್ ಹರಿದು ಹಾಕಿ ಪ್ರತಿಭಟನೆ ನಡೆಸಿದರು.ನ್ಯಾಯಾಲಯದ ಆದೇಶದಂತೆ ಕಾಲಾ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕಾವೇರಿ ವಿಚಾರದಲ್ಲಿ ತಮಿಳುನಾಡು ಪರ ವಕಾಲತು ವಹಿಸಿದ್ದ ರಜನಿ ಧೋರಣೆಯನ್ನು ಖಂಡಿಸಿರುವ ಕನ್ನಡಪರ ಹೋರಾಟಗಾರರು ಯಾವುದೇ ಕಾರಣಕ್ಕೂ ಕಾಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಮನವಿಗೆ ಚಿತ್ರಮಂದಿರದ ಮಾಲೀಕರು ಸ್ಪಂದಿಸಿದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಚಿತ್ರ ಪ್ರದರ್ಶನಕ್ಕೆ ಅಡ್ಡ ಪಡಿಸಿದ್ರು..ರಾಯಚೂರು ಪದ್ಬನಾಭ ಚಿತ್ರಮಂದಿರದಲ್ಲಿ ಬೆಳಿಗ್ಗೆ ಚಿತ್ರಪ್ರದರ್ಶನ ಮಾಡಲು ಟಿಕೇಟ್ ಗಳನ್ನು ಕೊಟ್ಟಿದ್ರು ನಂತರ ಅಡ್ಡಿಪಡಿಸದ ಬೇಳೆ ಪ್ರಕ್ಷಕರಿಗೆ ಮರಳಿ ಟಿಕೇಟ್ ಪಡೆದು ಹಣ ವಾಪಾಸ್ ನೀಡಿದರು.ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ನಿರಾಸಿಯಾಗಿದೆ.
ಇತ್ತ ಸಿಂದನೂರು ನಗರದಲ್ಲಿ ಚಿತ್ರ ಪ್ರದರ್ಶನ ಮಾಡಲು ಮುಂದಾದ ಟಾಕೀಸ್ ಮಾಲಿಕರು ವಿರುದ್ಧ ಕರವೇ ಕಾರ್ಯಕರ್ತರು ಘೋಷಣೆ ಹಾಕಿ ಕಾಲಾ ಸಿನಿಮಾದ ಪೋಸ್ಟರ್ಗಳಿಗೆ ಕಪ್ಪು ಮಸಿ ಬಳಿದರು ಹಾಗು ಮುಂದೆ ಹಾಕಿರುವ ಪೋಸ್ಟರ್ ಗಳನ್ನು ಹರಿದು ಹಾಕಿ ಪ್ರದರ್ಶನ ರದ್ದು ಪಡಿಸಿದರು..

LEAVE A REPLY

Please enter your comment!
Please enter your name here