ಕಿಡಿಗೇಡಿಗಳನ್ನು ಬಂದಿಸುವಂತೆ ಕೆಜೆಎಸ್ ಒತ್ತಾಯ

0
97

ಬೆಂಗಳೂರು/ಕೆ.ಆರ್.ಪುರ; ಬಾಬಾ ಸಾಹೇಬ್ ಡಾ||ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದವರನ್ನು ಕೂಡಲೆ ಬಂದಿಸಬೆಕೆಂದು ಆಗ್ರಹಿಸಿ ವಿಶೇಷ ತಹಶಿಲ್ದಾರ್ ಎನ್. ಲಕ್ಷ್ಮೀ ಯವರಿಗೆ ಮನವಿ ಸಲ್ಲಿಸಲಾಯಿತು ಎಂದು ಕರ್ನಾಟಕ ಜನಾಂದೋಲನ ಸಂಘಟನೆ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ ತಿಳಿಸಿದರು.
ಮಹದೇವ ಪುರ ವಿಧಾನ ಸಭಾ ಕ್ಷೇತ್ರದ ಪಟ್ಟಂದೂರು ಅಗ್ರಹಾರದ ಅಂಬೇಡ್ಕರ್ ಗುಟ್ಟದ ಮೇಲೆ ಕಿಡಿಗೇಡಿಗಳು ಜಾಗ ಕಬಳಿಸುವ ನೆಪದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದವರನ್ನು ಕೂಡಲೆ ಬಂದಿಸುವಂತೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಸರ್ಕಾರ ಜಾರಿಗೆ ತಂದಿರುವ 94 ಸಿಸಿ ಅಡಿಯಲ್ಲಿ ಮನೆ ಕಟ್ಟಿಕೊಂಡಿರುವ ಪಲಾನುಭವಿಗಳಿಗೆ ಹಕ್ಕು ಪತ್ರ ನೀಡುವುದಾಗಿ ತಿಳಿಸಿರುತ್ತಾರೆ ಆದರೆ ಅರ್ಹ ಬಡವರಿಗೆ ನೀಡದೆ ಬಲಾಡ್ಯರಿಗೆ ನೀಡಲಾಗುತ್ತಿದೆ ಎಂದರು. ಅಂಬೇಡ್ಕರ್ ಗುಡ್ಡದ ಮೇಲೆ ಮನೆ ಕಟ್ಟಿಕೊಂಡು ವಾಸವಾಗಿದ್ದ ರಾಮಣ್ಣರನ್ನು ಖಾಲಿಮಾಡಿಸಿ ಅಲ್ಲಿದ್ದ ಡಾ|| ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಅವಮಾನಿಸಿ ಅಲ್ಲಿದ್ದವರನ್ನು ಜಾಗಾ ಖಾಲಿಮಡಿಸಿರುತ್ತಾರೆ. ಇದರ ವಿಚಾರವಾಗಿ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಪೊಲೀಸರು ಇದುವರೆವಿಗೂ ಯಾವುದೆ ಕ್ರಮ ಕೈಗೊಳ್ಳದ ಕಾರಣ ತಹಶೀಲ್ದಾರ್ ರವರಿಗೆ ಕಿಡಿಗೇಡಿಗಳನ್ನು ಬಂದಿಸುವಂತೆ ಕೋರಿ ಮನವಿ ಸಲ್ಲಿಸಲಾಯಿತು. ಪಟ್ಟಂದೂರು ಅಗ್ರಹಾರ ಭಾಗದಲ್ಲಿ ನಕಲಿ ಹಕ್ಕು ಪತ್ರ ಸೃಷ್ಥಿಸಿ ಮಾರಾಟ ಮಾಡುವ ಜಾಲವಿದ್ದು ಅವರು ಜನರಿಗೆ ಮೋಸಮಾಡುವುದೆ ಕಾಯಕ ವಾಗಿದ್ದು ಅವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ತಾಹಶೀಲ್ದಾರ್ ಗಮನಕ್ಕೆ ತರಲಾಗಿದೆ ಎಂದರು. ಪಟ್ಟಂದೂರಿಗೆ ಸೇರಿದ ಸರ್ವೆ ನಂ. 42 ಸರ್ಕಾರಿ ಜಾಗವಾಗಿದ್ದು ಅದರಲ್ಲಿ ಬಿಲ್ಡಿಂಗ್ ಕಟ್ಟಲಾಗುತ್ತಿದೆ ಎಂದು ದೂರಿದರು. ಇನ್ನೂ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರು ಪೂರ್ವ ತಾಲ್ಲುಕು ಅಧ್ಯಕ್ಷ ಬಿದರಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಸಾಂಕೇತಿಕವಾದ ದರಣಿ ನಡೆಸಿ ವಿಶೇಷ ತಾಹಶೀಲ್ದಾರ್ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ವಿಶೇಷ ತಹಶೀಲ್ದಾರ್ ಎನ್.ಲಕ್ಷ್ಮೀರವರು ಪ್ರಕರಣಕ್ಕೆ ಸಂಬಂದಿಸಿದವರ ವಿರುದ್ದ ಕ್ರಮ ಕೈಗೊಳ್ಳುವ ಬರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೆಜೆಎಸ್ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ, ಉಪಾಧ್ಯಕ್ಷ ಗುಣಶೇಖರ್, ಬೆಂ.ಪೂರ್ವ ತಾಲ್ಲುಕು ಅಧ್ಯಕ್ಷ ವೆಂಕಟೇಶ್, ಶಿವಪ್ಪ, ರಾಮಸ್ವಾಮಿ, ಆಟೊ ಶಂಕರ್, ಮುನಿಯಪ್ಪ, ಪಯಾಜ್ ಅಹಮದ್, ಸಲೀನಾ, ಲೀಲಾವತಿ, ಪಿ.ರಫೀಕ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here