ಕಿಡಿಗೇಡಿಗಳನ್ನು ಬಂದಿಸುವಂತೆ ಒತ್ತಾಯ…

0
35

ಕಿಡಿಗೇಡಿಗಳಿಂದ ನಗರಸಭೆಯ ಪೀಠೋಪಕರಣ ಗಳು ಧ್ವಂಸ.

ಚಿಕ್ಕಬಳ್ಳಾಪುರ/ ಚಿಂತಾಮಣಿ ನಗರದ ನಗರಸಭೆಯಲ್ಲಿ ಪೀಠೋಪಕರಣಗಳನ್ನು ಧ್ವಂಸ ಗೊಳಿಸಿದ್ದ ಕಿಡಿಗೇಡಿಗಳನ್ನು ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ ಇನ್ನೂ ಮಿಕ್ಕ 40 ಜನರನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ನಗರಸಭೆ ವತಿಯಿಂದ ನಗರಸಭೆಯ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ನಗರಸಭೆಯ ಆವರಣದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಕಿಡಿಗೇಡಿಗಳನ್ನು ಬಂಧಿಸಿ ವರೆಗೂ ಧರಣಿ ನಡೆಸುವುದ್ದಗಿ ನಗರಸಭೆ ಅಧಿಕಾರಗಳು ತಿಳಿಸಿದರು.

ಚಿಂತಾಮಣಿ ನಗರದಲ್ಲಿ ಬೆಳಗ್ಗೆಯಿಂದ ಸಾಯಂಕಾಲ ವರೆಗೂ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಕೆಲಸ ಮಾಡುತ್ತಾರೆ, ಸಾರ್ವಜನಿಕರು ಕೆಲ ಸಂದರ್ಭದಲ್ಲಿ ಕೆಲಸ ಮಾಡುವಾಗ ಅಡ್ಡಿ ಮಾಡುತ್ತಿದ್ದಾರೆ,ಅಂತಹ ಸಂದರ್ಭದಲ್ಲಿ ನಮಗೆ ಯಾವುದೇ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಆದಕಾರಣ ನಮ್ಮಗೆ ಸೂಕ್ತ ರಕ್ಷಣೆ ಸಿಗೋವರೆಗೂ ಧರಣಿಯನ್ನು ಮುಂದುವರಿಸುತ್ತೇವೆ ಎಂದರು.

ಸ್ಥಳಕ್ಕೆ ಪ್ರಫೆಷನಲ್ ಎ.ಸಿ ಅಶೋಕ್ ತೇಲಿ ಅವರು ನಗರಸಭೆ ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಮತ್ತು ಅಧಿಕಾರಿಗಳ ಮನವಿ ಪತ್ರವನ್ನು ಸ್ವೀಕರಿಸಿದ ನಂತರ ಅಧಿಕಾರಿಗಳಿಗೆ ಮತ್ತು ಪೌರ ಕಾರ್ಮಿಕರಿಗೆ ಮನವಿ ಪತ್ರದಲ್ಲಿ ಏನು ನೀಡಿದ್ದೀರಾ ಅದನ್ನು ನನ್ನು ಸೋಮವಾರದವರೆಗೆ ಕಿಡಿಗೇಡಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ನಗರಸಭೆ ಅಧಿಕಾರಿಗಳನ್ನು ಧರಣಿಯನ್ನು ಹಿಂಪಡೆದರು.

LEAVE A REPLY

Please enter your comment!
Please enter your name here