ಕಿರುಗಾವಲು ಭಾಗದ ಕೆರೆಕಟ್ಟೆಗಳನ್ನು ನೀರು ಹರಿಸಲು ಒತ್ತಾಯಿಸ ಪ್ರತಿಭಟನೆ..

0
162

ಮಂಡ್ಯ/ಮಳವಳ್ಳಿ: ಕೆರೆಕಟ್ಟೆಗಳಿಗೆ ನಂಜಾಪುರ ಏತ ನೀರಾವರಿ ಹಾಗೂ ಕೆಆರ್ ಎಸ್ ಅಣೆಕಟ್ಟು ನಿಂದ ಬಿಟ್ಟಿರುವ ನೀರನ್ನು ಕಿರುಗಾವಲು ಭಾಗದ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಕಿರುಗಾವಲು ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಸಂತೆಮಾಳದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ನಟೇಶ ಹಾಗೂ ಮಾಜಿಸದಸ್ಯ ಕೆ.ವಿ ಪ್ರಕಾಶ ನೇತೃತ್ವದಲ್ಲಿ ರೈತರು ಕಚೇರಿಗೆ ಮುತ್ತಿಗೆ ಹಾಕಿ ಶಾಸಕ ನರೇಂದ್ರಸ್ವಾಮಿ ಹಾಗೂ ನೀರಾವರಿ ಇಲಾಖೆ ಅಧಿಕಾರಗಳ ವಿರುದ್ದ ಘೋಷಣೆ ಕೂಗಿದರು. ಕಳೆದ 12 ದಿನಗಳಿಂದ ಬಿಜಿಪುರ ಹೋಬಳಿ ಭಾಗದ ಕೆರೆಕಟ್ಟೆಗಳಿಗೆ ನೀರು ಬಿಟ್ಟಿದ್ದು, ಪ್ರತಿಭಟನೆಯ ಸಂದರ್ಭದಲ್ಲಿ 7 ದಿನ ಮಾತ್ರ ನೀರುಬಿಡುವುದುಎಂದು ತೀರ್ಮಾನಿಸಿದ್ದರೂ 12 ದಿನವಾದರೂ ಬಿಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ನಾಲೆಯಿಂದ ಮೊದಲು ಕಿರುಗಾವಲು ಭಾಗಕ್ಕೆ ಮೊದಲು ನೀಡಬೇಕು ಆದರೆ ಶಾಸಕರ ಕುಮ್ಮುಕುನಿಂದ ಈ ಭಾಗದ ನಾಲೆಗೆ ನೀರು ಬರುತ್ತಿಲ್ಲ ಎಂದು ಮಾಜಿ ತಾಪಂ ಸದಸ್ಯ ,ಕೆ.ವಿ ಪ್ರಕಾಶ ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಎಇಇ ಶಿವಾಜಿ ರವರು ಪ್ರತಿಭಟನಾಕಾರರನ್ಬು ಮನವೋಲಿಸಲು ಯತ್ನಿಸಿದರು ಆದರೆ ಪ್ರತಿಭಟನಾಕಾರರು ನಾಲಾ ಗೇಟ್ ಹೊಡೆಯಲು ನಾಲೆ ಬಳಿತೆರಳಿದರು. ಪ್ರತಿಭಟನಾಕಾರ ಒತ್ತಡಕ್ಕೆ ಮಣಿದ ಅಧಿಕಾರಿ ಒಂದು ಗೇಟ್ ನಿಂದ ನೀರು ಬಿಟ್ಟರು . ಇದೇ ಸಂದರ್ಭದಲ್ಲಿ ತಾ.ಪಂ ಸದಸ್ಯ ಸೋಮಶೇಖರ್ ಮಾತನಾಡಿ ಕೆರೆ ತುಂಬುವ ಮೊದಲೇ ಗೇಟ್ ಬಂದ್ ಮಾಡಿದರೆ ಉಗ್ರಹೋರಾಟ ಜೊತೆಗೆ ನಾಲೆಯನ್ನೇ ಹೊಡೆದು ಹಾಕುವುದಾಗಿ ತಿಳಿಸಿದರು ಪ್ರತಿಭಟನೆಯಲ್ಲಿ ಕೆ.ವಿ ಪ್ರಕಾಶ್ ತಾ.ಪಂ ಸದಸ್ಯ ನಟೇಶ, ಪ್ರಕಾಶ, ಆನಂದಕಲ್ಕುಣಿ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here