ಕುಂಟುತ್ತಾ ಸಾಗಿರುವ ಅಮೃತ ಯೋಜನೆ ಕಾಮಗಾರಿ

0
194

ಬಳ್ಳಾರಿ /ಹೊಸಪೇಟೆ:ಹೊಸಪೇಟೆಗೆ ಕೇಂದ್ರ ಸರಕಾರದ ಅಮೃತ ಯೋಜನೆ ಜಾರಿ-ಕುಂಟುತ್ತಾ ಸಾಗಿರುವ ಕಾಮಗಾರಿ-ಅವೈಜ್ಣಾನಿಕ ಕಾಮಗಾರಿ-ಹಿಡಿಶಾಪ ಹಾಕುತ್ಯಿರುವ ನಾಗರಿಕರು

ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರಕ್ಕೆ ಕೇಂದ್ರ ಸರ್ಕಾರದ ಅಮೃತ ಯೋಜನೆ ಜಾರಿ ಆಗಿದ್ದೇನೋ ಸರಿ. ಆದರೆ, ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ಎಲ್ಲೋ ಒಂದು ಕಡೆ ವಿಫಲರಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಟಿ.ಬಿ.ಡ್ಯಾಂ ರಸ್ತೆಯ ಗೋಕುಲನಗರ.

ಹೌದು….

ಇದು ಹೊಸಪೇಟೆ ನಗರಸಭೆಯ 30 ನೇ ವಾರ್ಡ್ ನಲ್ಲಿರುವ ಗೋಕುಲನಗರ. ಇಲ್ಲಿ ಶ್ರೀಕೃಷ್ಣ ಮಂದಿರ, ಇಂಜಿನಿಯರಿಂಗ್ ಕಾಲೇಜು, ಸಾಯಿಬಾಬಾ ಸರ್ಕಲ್ ಇದೆ. ಬೆಳೆಯುತ್ತಿರುವ ಈ ನಗರದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇಲ್ಲಿನ ನಾಗರಿಕರು ಅನೇಕ ಬಾರಿ ನಗರಸಭೆಗೆ ಮನವಿ ಮಾಡಿ ತಮ್ಮ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸುವಂತೆ ಮನವಿ ಮಾಡಿದ್ರು.

ಇದೀಗ ಅಮೃತ ಯೋಜನೆಯಡಿ ಒಳಚರಂಡಿ ಕಾಮಗಾರಿ ನಡೆದಿದೆ. ಆದ್ರೆ, ಕಳೆದ ಒಂದು ತಿಂಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಇಲ್ಲಿ ಮಳೆ ಬಂದ್ರೆ ದೊಡ್ಡದೊಂದು ಪ್ರವಾಹವೇ ಉಂಟಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ರಸ್ತೆಯ ಪಕ್ಕದಲ್ಲಿ ಜಮಾವಣೆಗೊಂಡ ನೀರಿನಿಂದ ಇಲ್ಲಿನ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ‌ಬೀರುತ್ತಿದೆ. ವಿಪರೀತ ಸೊಳ್ಳೆಗಳು ಮತ್ತು ವಿಷಕಾರಕ ಜಂತುಗಳ ಕಾಟವೂ ಇದೆ. ಅಧಿಕಾರಿಗಳು ಕಾಟಾಚಾರಕ್ಕೆ ಕಾಮಗಾರಿ ನಡೆಸದೇ ವೈಜ್ಞಾನಿಕವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಅಂದಹಾಗೆ, ಹೊಸಪೇಟೆ ನಗರದಲ್ಲಿ ಒಳಚರಂಡಿ ಕಾಮಗಾರಿಗಾಗಿ 91 ಕೋಟಿ ರೂಪಾಯಿ ಹಣ ಬಿಡುಗಡೆ ಆಗಿದೆ. ಕುಡಿಯುವ ನೀರಿಗಾಗಿ 52 ಕೋಟಿ ರೂ. ಬಿಡುಗಡೆ ಆಗಿದೆ. ಇದರಲ್ಲಿ ಕೇಂದ್ರದ ಅನುದಾನ ಶೇ 50 ರಷ್ಟು, ರಾಜ್ಯ ಸರ್ಕಾರದ ಅನುದಾನ ಶೇ 20 ರಷ್ಟು ಮತ್ತು ಹೊಸಪೇಟೆ ನಗರಸಭೆಯ ಶೇ 30 ಅನುದಾನ ಬಳಕೆ ಆಗುತ್ತಿದೆ. ಕೇವಲ ಕಾಟಾಚಾರಕ್ಕೆಂದು ಕಾಮಗಾರಿ ಆರಂಭಿಸದೇ ವೈಜ್ಞಾನಿಕವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here