ಕುಡಿಯುವ ನೀರಿಗಾಗಿ ರಸ್ತೆ ಬಂದ್

0
138

ಬಳ್ಳಾರಿ/ಹೊಸಪೇಟೆ:ತಾಲೂಕಿನ ಅನಂತಶಯನಗುಡಿ ತಾಂಡದ ಜನರಿಗೆ ಸಮರ್ಪಕ ಕುಡಿಯುವ ನೀರು ಬದಗಿಸಲು ಆಗ್ರಹಿಸಿ ಖಾಲಿ ಕೊಡಗಳನ್ನಡಿದು ರಸ್ತೆ ಬಂದ್‌ ಮಾಡಿ ಪ್ರತಿಭಟಿಸಿದರು.ಹೊಸಪೇಟೆ ನಗರಸಭೆಯ ವ್ಯಾಪ್ತಿಯ 7 ನೇ ವಾರ್ಡಿನ ವ್ಯಾಪ್ತಿಯಲ್ಲಿ ಅನಂತಶಯನಗುಡಿ ತಾಂಡಾ ಬರಲಿದ್ದು, ಈ ಪ್ರದೇಶದಲ್ಲಿ 1500 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ದರೂ, ನಮಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here