ಕುಡಿಯುವ ನೀರು ಕೊಡಲು ನಗರಸಭೆಯ ಅಧಿಕಾರಿಗಳಿಗೆ ತಾಖೀತು..

0
240

ಬಳ್ಳಾರಿ/ಹೊಸಪೇಟೆ:ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೆ ಪರಿಹರಿಸುವಂತೆ ನಗರಸಭೆಯ ಪೌರಾಯುಕ್ತರಿಗೆ ಶಾಸಕ ಆನಂದ್ ಸಿಂಗ್ ಹೇಳಿದರು.ನಗರದ ಆಕಾಶವಾಣಿ ಏರಿಯಾದಲ್ಲಿ ಗುರುವಾರ ನಾಗರಿಕರ ಸಮಸ್ಯೆ ಹಾಲಿಸಿ ಸ್ಥಳಕ್ಕೆ ನಗರಸಬೆಯ ಪೌರಾಯುಕ್ತರನ್ನು ಕರಿಸಿ ಆಕಾಶವಾಣಿ ಏರಿಯಾದ ನಾಗರಿಕರಿಗೆ 7ದಿನಕ್ಕೆ ಒಂದು ಬಾರಿ ಕುಡಿಯುವ ನೀರು ಸಾರಬುರಾಜು ಮಾಡಲಾಗುತ್ತಿದೆ, ಇದರಿಂದ ಈ ಬಾಗದ ಜನರು ಕುಡಿಯುವ ನೀರಿಗಾಗಿ ಪ್ರತಿ ದಿನ ಪರದಾಡುವ ಸ್ಥೀತಿ ನಿರ್ಮಾಣವಾಗಿದೆ ಎಂದು ತಿಳಿದು ನನಗೆ ಬೇಜಾರವಾಗಿದೆ,ಕೂಡಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಈ ಬಾಗದ ಜನರಿಗೆ ಸಮರ್ಪಕ ಕುಡಿಯು ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಂತೆ ಹೇಳಿದರು. ಇದು ಅಲ್ಲದೇ ಸಾರ್ವಜನಿಕ ಶೌಚಾಲಯ ಹಾಗು ಸ್ವಚ ಭಾರತ ಯೋಜನೆಡಿಯಲ್ಲಿ ಮನೆಗೊಂದು ಶೌಚಾಲಯವನ್ನು ನಿರ್ಮಿಸಿ ಕೊಡುವಂತೆ ತಿಳಿಸಿದ ಅವರು ಗುಂಪು ಮಹಿಳಾ ಸಂಘಗಳು ಒಟ್ಟಾಗಿ ಬಂದರೆ, 30 ಹೋಲಿಗೆ ಯಂತ್ರಗಳನ್ನು ಕೊಡಿಸುವುದಾಗಿ ಹೇಳಿದರು. ಸ್ಥಳೀಯ ವೀರಾಂಜೀನೆಯ ದೇವಸ್ಥಾನಕ್ಕೆ ಆರಾಧನಾ ಯೋಜನೆಡಿಯಲ್ಲಿ ಇನ್ನು 2.5ಲಕ್ಷ ರೂಗಳನ್ನು ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯ ಚಂದ್ರಕಾಂತ್ ಕಾಮತ್, ರೂಪೇಶ್ ಕುಮಾರ್. ಮುಖಂಡರಾದ ಧಮೇಂದ್ರ ಸಿಂಗ್, ಬಿ,ಎಸ್,ಜಂಬಯ್ಯ ನಾಯಕ, ಕಿಚಡಿ ಶ್ರೀನಿವಾಸ ಬ್ಯಾಂಕ್ ಚಂದ್ರಪ್ಪ. ಜೆ.ಸತ್ಯನಾರಾಯಣ. ಕಿಚಿಡಿ ವಂಸತ ಗೊಸಲ ಭರಮಪ್ಪ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here