ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕ ಸೂಚನೆ.

0
214

ಬಳ್ಳಾರಿ,/ಕೂಡ್ಲಿಗಿ ತಾಲೂಕಿನಾದ್ಯಂತ ಫ್ಲೋರೈಡ್ ಅಂಶ ಹೊಂದಿರುವ ನೀರಿನಿಂದ ಜನರಲ್ಲಿ ಆರೋಗ್ಯದ ಸಮಸ್ಯೆಗಳು ತಲೆ ದೋರುತ್ತಿವೆ. ಅಧಿಕಾರಿಗಳು ಮಳೆ ನೀರಿನ ಸಂಗ್ರಹದಿಂದ ಶುದ್ಧ ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡಬೇಕೆಂದು ಶಾಸಕ ಬಿ.ನಾಗೇಂದ್ರ ತಿಳಿಸಿದರು.

ಕೂಡ್ಲಿಗಿ ತಾಲೂಕಿನ ಮಾಕನಡುಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಜೋಗಿಹಳ್ಳಿ ಗ್ರಾಮದಲ್ಲಿ `ನಮ್ಮ ನಡೆ ಹಳ್ಳಿಯ ಕಡೆಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಕನಡುಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಕುಂಟೆಗಳಲ್ಲಿ ನೀರು ತುಂಬಿಸುವ ಕಾರ್ಯವಾಗಬೇಕು. ಮಳೆ ನೀರು ಸಂಗ್ರಹಗೊಂಡಲ್ಲಿ ಇಂತಹ ಕೆರೆ ಕುಂಟೆಗಳಿಂದ ಜಲ ಮರುಪೂರಣವಾಗಲಿದೆ.
ರೈತರಿಗೆ ಮತ್ತು ಜನ-ಜಾನುವಾರುಗಳ ಬಳಕೆಗೆ ಅನುಕೂಲವಾಗಲಿದೆ. ಮಳೆ ನೀರಿನ ಸಂಗ್ರಹದಿಂದ ಶುದ್ಧ ಕುಡಿವ ನೀರಿನ ಶೇಖರಣೆಯೂ ಆಗುತ್ತದೆ. ಫ್ಲೋರೈಡ್ ಅಂಶವೂ ಸಹ ಕ್ಷೀಣಿಸುತ್ತದೆ. ಮಕ್ಕಳಿಗೆ ಮತ್ತು ಮಹಿಳೆಯರಿಗೆ ನೀರು ಶುದ್ಧೀಕರಣ ಘಟಕದಿಂದ ನೀರು ಪೂರೈಸಿದಲ್ಲಿ ಆರೋಗ್ಯದ ಮೇಲೆ ಸತ್ಪರಿಣಾಮ ಬೀರುತ್ತದೆ. ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಲೆಕ್ಕಿಗರು, ಕಂದಾಯ ವಿಭಾಗದ ಅಧಿಕಾರಿಗಳು, ರೈತ ಮಖಂಡರು, ಗ್ರಾಮಗಳ ಹಿರಿಯರು ಇದ್ದರು.

LEAVE A REPLY

Please enter your comment!
Please enter your name here