ಕುರಿಸಂತೆಯಲ್ಲಿ ಜೆಬುಗಳ್ಳರ ಕೈಚಳಕ..

0
180

ವಿಜಯಪುರ:ವ್ಯಾಪಾರಿಗಳ 2 ಲಕ್ಷ 77 ಸಾವಿರ ಹಣ ಎಗರಿಸಿದ ಖದೀಮರು.ಕುರಿ ಸಂತೆಯಲ್ಲಿ ಜೇಬು ಕಳ್ಳರು ತಮ್ಮ ಕೈಚಳಕ ತೋರಿಸಿ ಇಬ್ಬರು ವ್ಯಾಪಾರಿಗಳಿಂದ ಒಟ್ಟು 2 ಲಕ್ಷ 77 ಸಾವಿರ ರೂ ಹಣ ಎಗರಿಸಿದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಕುರಿಸಂತೆಯಲ್ಲಿ ನಡೆದಿದೆ.ಕುರಿ ವ್ಯಾಪಾರಕ್ಕೆಂದು ಬಸವನ ಬಾಗೇವಾಡಿ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕುರಿಸಂತೆಗೆ ಆಗಮಿಸಿದ್ದ ಮೈಸೂರು ಮೂಲದ ಚಂದ್ರಣ್ಣ ಹಾಗು ಅಮೀನಗಡದ ವ್ಯಾಪಾರಿಯೊಬ್ಬರ ಜೆಬುಗಳಿಗೆ ಕೈಹಾಕಿದ ಪಿಕ್ ಪಾಕೆಟರ್ಸ್ ಒಟ್ಟು 2 ಲಕ್ಷ 77 ಸಾವಿರ ರೂ ಹಣ ಎಗರಿಸಿದ್ದಾರೆ. ಇದರಿಂದ ಹಣ ಕಳೆದುಕೊಂಡಿದ್ದ ಕಂಗಾಲಾಗಿದ್ದ ವ್ಯಾಪಾರಿಗಳು ಕಳ್ಳರ ಹುಡುಗಾಟದಲ್ಲಿದ್ದಾಗ ಜೆಬುಗಳ್ಳರ ಗುಂಪಿನ ಒಬ್ಬನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಊಳಿದವರು ಪರಾರಿಯಾಗಿದ್ದಾರೆ. ನಂತರ ಕಳ್ಳನನ್ನು ಹಿಡಿದು ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.

ಬೈಟ್ 1: ಚಂದ್ರಣ್ಣ, ಹಣ ಕಳೆದುಕೊಂಡ ವ್ಯಾಪಾರಿ

ಬೈಟ್ 2: ಹಣ ಕಳೆದುಕೊಂಡ ಅಮೀನಗಡ ವ್ಯಾಪಾರಿ

ಇನ್ನೂ ಈ ಪ್ರಕರಣ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಹಣ ಕಳೆದುಕೊಂಡ ವ್ಯಾಪಾರಿಗಳು ದೂರು ನೀಡಲು ಠಾಣೆಗೆ ಹೋದಾಗ ಪಿಎಸ್ಐ ಹೊರಗಡೆ ಹೊಗಿದ್ದು, ಸಂಜೆ ಬರುವಂತೆ ಠಾಣೆಯ ಸಿಬ್ಬಂದಿಗಳು ಹೇಳಿ ನಿರ್ಲಕ್ಷ್ಯ ತೋರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here