ಕುಸಿದು ರಸ್ತೆ ಸಂಚಾರ ಕಟ್

0
238

ಬಳ್ಳಾರಿ / ಬಳ್ಳಾರಿ : ಬಿಸಿಲೂರಿನಲ್ಲಿ ಅನುರಣಿಸಿದ ರೋಹಿಣಿ ಮಳೆ-ಬಳ್ಳಾರಿ ಜಿಲ್ಲೆಯಾದ್ಯಂತ ಆಸ್ತಿ-ಪಾಸ್ತಿ ನಷ್ಟ-ಕೆಲವೆಡೆ ಸೇತುವೆ ಕುಸಿದು ರಸ್ತೆ ಸಂಚಾರ ಕಟ್-ನಿನ್ನೆ ಸಂಜೆಯಿಂದ ವಿದ್ಯುತ್ ಇಲ್ಲ-ಸಾರ್ವಜನಿಕರ ಪರದಾಟ-ರೈತರಲ್ಲಿ ಖುಷಿಬಳ್ಳಾರಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದ ಆಸ್ತಿ-ಪಾಸ್ತಿ ಹಾನಿಯಾದ ಘಟನೆ ನಡೆದಿದೆ. ನಿನ್ನೆ ಸಂಜೆ ೬ ಗಂಟೆಯಿಂದ ರಾತ್ರಿಯಿಡೀ ಸುರಿದ ಮಳೆಯಿಂದ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದು ಹೋಗಿವೆ. ಸೇತುವೆಗಳು ಕುಸಿದು ಹೋಗಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿದೆ. ಬಳ್ಳಾರಿಯೂ ಸೇರಿದಂತೆ
ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಂಡೂರು, ಸಿರುಗುಪ್ಪ, ಕಂಪ್ಲಿ, ಕುರುಗೋಡು ಭಾಗಗಳಲ್ಲಿ ಭಾಗಶಃ ಮಳೆಯಾಗಿದೆ. ಗುಡುಗು, ಸಿಡಿಲು, ಗಾಳಿ, ಮಿಂಚು ಸಮೇತ ಸುರಿದ ಮಳೆಗೆ ಅನೇಕ ಮನೆಗಳಿಗೆ ಹಾನಿಯಾಗಿದೆ.ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಮಸಮುದ್ರ ಗ್ರಾಮ‌ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಯೊಂದು ಮಳೆ ನೀರಿನ ರಭಸಕ್ಕೆ ಕೊಚ್ವಿಕೊಂಡು ಹೋಗಿದೆ. ಗ್ರಾಮದ ಬಳಿಯ ಎರಡೂ ಸೇತುವೆಗಳು ಕಿತ್ತುಕೊಂಡು ಹೋಗಿರುವುದರಿಂದ ಎರ್ರಂಗಳಿ-ವೀರಾಂಜನೇಯ ಕ್ಯಾಂಪು ಮತ್ತು ಸಿದ್ಧಮ್ಮನಹಳ್ಳಿ ಕ್ಯಾಂಪುಗಳ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ ‌ಬಿಎಸ್ಎನ್ಎಲ್ ಕೇಬಲ್ ಹಾಳಾಗಿವೆ. ವಿದ್ಯುತ್ ತಂತಿ ಹರಿದು ಹೋಗಿವೆ. ಕುಡಿಯುವ ನೀರಿನ ಪೈಪ್ ಸಹ ಹಾಳಾಗಿದೆ. ಇದ್ರಿಂದಾಗಿ ಸೋಮಸಮುದ್ರ ಗ್ರಾಮ‌ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ನಿನ್ನೆ ಸಂಜೆಯಿಂದ ಕರೆಂಟ್ ಇಲ್ಲ. ಇದ್ರಿಂದ ಕುಡಿಯುವ ನೀರಿಗೆ ಜನ್ರು ಪರಿತಪಿಸಬೇಕಾಗಿದೆ. ಜೊತೆಗೆ ಗ್ರಾಮದ ಭೂಷ ಶೆಟ್ಟಿ ಎಂಬುವರ ಅಂಗಡಿಯೊಳಗೆ ನುಗ್ಗಿದ ನೀರಿನಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಎಲ್ಲ ರೀತಿಯ ಕಿರಾಣಿ ಸಾಮಾನು-ಸರಂಜಾಮುಗಳು ಹಾಳಾಗಿವೆ.ಗ್ರಾಮ‌ಪಂಚಾಯಿತಿ ಅಧ್ಯಕ್ಷರು ಪರಿಹಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಗ್ರಾಮದ ಯುವ ಮುಖಂಡ ರಾಘವೇಂದ್ರ ಅವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಸಂಪರ್ಕ ಸಾಧಿಸಿ ನಷ್ಟದ ಬಗ್ಗೆ ಮಾಹಿತಿ ನೀಡಿ ತಾತ್ಕಾಲಿಕ ಪರಿಹಾರ ಕ್ರಮಗಳಿಗೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here