ಕೂಲಿಕಾರ್ಮಿಕರ ಪ್ರತಿಭಟನೆ…

0
198

ಕೋಲಾರ /ಬಂಗಾರಪೇಟೆ:ನಮ್ಮೂರು ಬಂಗಾರಪೇಟೆಯ ನೇರಳಕೆರೆ ಗ್ರಾಮದ ಸಮೀಪಬಿರುವ ಕಾನ್ಕರ್ಡ್ ಗಾರ್ಮೆಂಟ್ ವಿರುದ್ದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 80ರಿಂದ100 ಜನ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಪ್ರತಭಟನೆ ಮಾಡಲಾಗಿದೆ, ಇದರಿಂದ ಕಾರ್ಮಿಕರಲ್ಲಿ ಆತಂಕವನ್ನುಂಟು ಮಾಡಿಸಿದೆ. ಕಾರ್ಖಾನೆಯ ಆಡಳಿತ ವರ್ಗವು ತೆಗೆದುಕೊಂಡಿರುವ ನಿರ್ಧಾರದಿಂದ ಬಡ ಕೂಲಿಕಾರ್ಮಿಕರು ನ್ಯಾಯಕ್ಕಾಗಿ ಮಂಗಳವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆದುತ್ತಿದ್ದಾರೆ, ಇಂದು ಬೆಳಿಗ್ಗೆ ಪ್ರತಿದಿನದಂತೆ ಕೆಲಸಕ್ಕೆ ಆಗಮಿಸಿದ ಕಾರ್ಮಿಕರನ್ನ ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ.ಇದರಿಂದ ನ್ಯಾಯಕ್ಕಾಗಿ ಕಾರ್ಮಿಕರು ಗಾರ್ಮೆಂಟ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here