ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ.

0
162

ಕೃಷಿ ಅಭಿಯಾನ ಕಾರ್ಯಕ್ರಮ ಚಾಲನೆ.
ಯೋಜನೆಗಳು ರೈತರಿಗೆ ತಲುಪಿದಾಗ ಮಾತ್ರ ಫಲಪ್ರದ.

ರಾಯಚೂರು: ಸರ್ಕಾರದ ಯೋಜನೆಗಳು ರೈತರಿಗೆ ಮುಟ್ಟಿದ್ದಾಗ ಮಾತ್ರ ಯೋಜನೆಗಳು ಅರ್ಥಪೂರ್ಣವಾಗಲು ಸಾಧ್ಯ ಎಂದು ಶಾಸಕ ಶಿವರಾಜ ಪಾಟೀಲ್ ಹೇಳಿದರು.

ಅವರಿಂದು ಜಿಲ್ಲಾಧಿಕಾರಿ ಆವರಣದಲ್ಲಿ ಕೃಷಿ ಅಭಿಯಾನ ೨೦೧೭-೧೮ ಇಲಾಖೆಗಳ ನಡೆಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ರೈತನ ಬದುಕಿಗೆ ಕೃಷಿಯೇ ಆಧಾರ ಸರಕಾರದ ಯೋಜನೆಗಳು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡಬೇಕು.

ಸಮಗ್ರ ಕೃಷಿ ಕುರಿತು ಸರಕಾರ ಅನೇಕ ಯೋಜನೆಗಳು ರೈತರಿಗೆ ತಲುಪಿದಾಗ ಮಾತ್ರ ಯೋಜನೆಗಳು ಫಲಪ್ರದವಾಗಲು ಸಾಧ್ಯವೆಂದರು.

ಸಮಗ್ರ ಕೃಷಿ ಬೇಸಾಯ ಸಂಬಂದಿಸಿದ ಮಾಹಿತಿಯನ್ನು ರೈತರಿಗೆ ತಲುಪಿಸಬೇಕು.ಕೃಷಿ ಅಭಿಯಾನದ ಯೋಜನೆಯನ್ನು ಗ್ರಾಮೀಣ ಭಾಗದ ರೈತರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕೃಷಿ ಅಭಯಾನದ ಉದ್ದೇಶಿತ ಯೋಜನೆಗೆ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಕವಾಗಿ ಕೆಲಸಗಳಲ್ಲೆ ತೊಡಗಬೇಕು.ಕೃಷಿ ವಸ್ತು ಪ್ರದರ್ಶನ, ರೈತರೊಂದಿಗೆ ಸಂವಾಧ,ಕೃಷಿ ಕಾರ್ಯಕ್ರಮ್ಳನ್ನು ಅಚ್ಚು ಕಟ್ಟಾಗಿ ಮಾಡಿ ಬೇಕು

ಜಿಲ್ಲಾಧಿಕಾರಿ ಬಗಾದಿ ಗೌತಮ್. ಕೃಷಿ ಜಂಟಿ ನಿರ್ದೇಶಕ ಕೆ.ಕಿರಣಕುಮಾರ್.ಕೃಷಿ ಅಧಿಕಾರಿ ದೀಕ್ಷಿತ್,ಅಬೀದ್,ರೈತ ಸಂಘದ ಜಿಲ್ಲಾದ್ಯಕ್ಷ ಲಕ್ಷ್ಮಣ ಸೇರಿದಂತೆ ಅನೇಕರು ಇದ್ದರು.

LEAVE A REPLY

Please enter your comment!
Please enter your name here