ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನ…

0
233

ಚಾಮರಾಜನಗರ/ಕೊಳ್ಳೇಗಾಲ:ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಕೊಳ್ಳೇಗಾಲ ನಗರದ ಗುರುಭವನದ ಆವರಣದಲ್ಲಿ ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನ ನಡೆಯಿತು.
ಇದರೊಂದಿಗೆ ಗುರುಭವನದ ಆವರಣದಲ್ಲಿ ವಸ್ತು ಪ್ರದರ್ಶನದಲ್ಲಿ ಸಿರಿಧಾನ್ಯಕ್ಕೆ ಸಂಬಂಧಿಸಿದಂತೆ ಹಲವಾರು ಮಳಿಗೆಗಳನ್ನು ತೆರೆಯಲಾಗಿತ್ತು.
ಕೃಷಿ ಉಪಕರಣಗಳು, ಕೃಷಿ ಬೀಜಗಳು, ರಾಸಾಯನಿಕ ಗೊಬ್ಬರ ಕಂಪೆನಿಗಳು, ತೋಟಗಾರಿಕೆ ಬೆಳೆಗಳು, ಉದ್ಯಾನ ಸಸ್ಯಗಳು, ಕೃಷಿ ಉತ್ಪನ್ನಗಳ ಮಾದರಿಗಳು ಪ್ರದರ್ಶನದಲ್ಲಿದ್ದವು. ಪ್ರಮುಖವಾಗಿ ಸಿರಿಧಾನ್ಯ ಪ್ರದರ್ಶನ ಹಾಗೂ ಅವುಗಳ ಉತ್ಪನ್ನಗಳ ಮಾರಾಟದ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಕೃಷಿ ಮೇಳ ಹಾಗೂ ವಸ್ತುಪ್ರದರ್ಶನದಿಂದ ರೈತರಿಗೆ ಏನೇನು ಉಪಯೋಗ ಎಂಬುದರ ಕುರಿತು ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್.ಮಹಾದೇವ ತಿಳಿಸಿದರು.

LEAVE A REPLY

Please enter your comment!
Please enter your name here