ಕೃಷಿ ಸಚಿವ ರೈತರೊಂದಿಗೆ ಸಂವಾದ

0
206

ಬಳ್ಳಾರಿ/ಹೊಸಪೇಟೆ : ತಾಲೂಕಿನ ಕಲ್ಲಹಳ್ಳಿಯ ಬಳಿ ನೂತನ ಕೃಷಿ ಹೊಂಡಕ್ಕೆ ಭೇಟಿ ನೀಡಿದ ಕೃಷಿ ಸಚಿವ ಕೃಷ್ಣಭೈರೇಗೌಡ, ಹೊಂಡ ವೀಕ್ಷಣೆ – ರೈತರೊಂದಿಗೆ ಸಂವಾದದ ನಡೆಸಿದರು.
ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆ ವಿಚಾರ,? ಇಲ್ಲಿಯವರೆಗೆ ಎಸ್ ಎಂ ಕೃಷ್ಣರವರು ಬಿಜೆಪಿ ಸೇರ್ಪಡೆ ಬಗ್ಗೆ ಎಲ್ಲೂ ಬಹಿರಂಗ ಹೇಳಿಕೆ ನೀಡಿಲ್ಲ, ಅವರು ಕಾಂಗ್ರೆಸ್ ಮುಖಂಡರಾಗಿ ರಾಜ್ಯ ಕೇಂದ್ರ ಸರ್ಕಾರದ ಬಹುತೇಕ ಎಲ್ಲ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಅವರೊಬ್ಬ ರಾಜಕೀಯ ಮುತ್ಸದ್ಧಿ, ಅವರು ಪಕ್ಷಕ್ಕೆ ಮಾರ್ಗದರ್ಶನ ಮಾಡಬೇಕು, ಅದನ್ನು ಬಿಟ್ಟು ರಾಜಕೀಯ ಮಾಡುತ್ತಾರೆಂದರೆ ಒಪ್ಪಲಾಗದು, ಅವರ ಮನಸ್ಸಿನಲ್ಲೇನಿದೆ ಎಂಬುದನ್ನು ಅವರು ಹೇಳಿಲ್ಲ, ಇಂತಹ ವಯಸ್ಸಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು. ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಚಾರ‌ ಮಾತನಾಡುತ್ತಾ ಕೇಂದ್ರ ಸರ್ಕಾರದಿಂದ 450 ಕೋಟಿ ರೂಪಾಯಿ ಬಿಡುಗಡೆ ಆಗಿದೆ, 4,500 ಕೋಟಿ ರೂಪಾಯಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಕೇಂದ್ರ 1,682 ಕೋಟಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿತ್ತು, ಆದರೀಗ ಬಿಡುಗಡೆಯಾಗಿರುವ 450 ಕೋಟಿ ರೂಪಾಯಿಗಳನ್ನು ರಾಜ್ಯದ ನಾಲ್ಕು ವಲಯಗಳಲ್ಲಿ ಹಂಚಲಾಗುವುದು ಎಂದರು

LEAVE A REPLY

Please enter your comment!
Please enter your name here