ಕೆಐಎಡಿಬಿ ವಿರುದ್ಧ ರೈತರ ಪ್ರತಿಭಟನೆ

0
108

ಚಾಮರಾಜನಗರ/ಕೊಳ್ಳೇಗಾಲ: ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರವೂ ನೀಡದೆ, ಮತ್ತೂಂದು ಕಂಪನಿಗೆ ಭೂಮಿ ಮಾರಾಟ ಮಾಡಿರುವ ಕೆಐಎಡಿಬಿ ವಿರುದ್ಧ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು. ತಾಲೂಕಿನ ದೊಡ್ಡಿಂದುವಾಡಿ ಸಮೀಪವಿರುವ ಅದಾನಿ ವಾದ್ರಾ ಸೋಲಾರ್‌ ಪ್ಲಾಂಟ್‌ ಮುಂಭಾಗದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆ ನಿರ್ಮಿಸುವ ಸಲುವಾಗಿ 2009ರಲ್ಲಿ ಕೆಐಡಿಬಿಯು ಗುಂಡಾಲ್‌ ಜಲಾಶಯ ದ ವ್ಯಾಪ್ತಿಗೆ ಬರುವ ದೊಡ್ಡಿಂದು ವಾಡಿ, ಸಿಂಗಾ ನಲ್ಲೂರು, ಮೋಡಳ್ಳಿ, ಕಾಮಗೆರೆ ಸೇರಿದಂತೆ 100ಕ್ಕೂ ಹೆಚ್ಚು ರೈತರಿಂದ ಸುಮಾರು 413 ಎಕರೆಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಮನೆಗೆ ಒಬ್ಬರಿಗೆ ಉದ್ಯೋಗ ಹಾಗೂ ಜಮೀನಿಗೆ ತಕ್ಕ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಈಡೇರಿಲ್ಲ ಎಂದು ದೂರಿದರು.

ಜಮೀನು ಕಳೆದುಕೊಂಡ ರೈತರು ನ್ಯಾಯಾಲಯ ದ ಮೊರೆ ಹೋಗಿದ್ದರು. ನ್ಯಾಯಾಲಯವು ರೈತರಿಗೆ ಸೂಕ್ತ ಪರಿಹಾರ, ಅವರು ಕೋರ್ಟ್‌ಗೆ ಕಟ್ಟಿರುವ ಶುಲ್ಕ ಹಾಗೂ ಕೊಡಬೇಕಾಗಿರುವ ಪರಿಹಾರಕ್ಕೆ ಶೇ.15ರಂತೆ ಬಡ್ಡಿಯನ್ನೂ ನೀಡು ವಂತೆ ಆದೇಶ ಮಾಡಿತ್ತು.ಆದರೂ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುವ ಭೂಸ್ವಾಧೀನ ಇಲಾಖೆಯು ಜಮೀನನ್ನು ಅದಾನಿ ಕಂಪನಿಗೆ ಮಾರಾಟ ಮಾಡಿದೆ.

ಈಗಾಗಲೇ ಕಂಪನಿ ಸೋಲಾರ್‌ ಪ್ಲಾಂಟ್‌ ಪ್ರಾರಂಭಿಸಿದೆ. ಆದರೆ, ರೈತರಿಗೆ ಮಾತ್ರ ಪರಿಹಾರದ ಹಣ ಸಿಕ್ಕಿಲ್ಲ ಎಂದು ದೂರಿದರು. ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿನಲ್ಲಿ ದಲಿತ ಕುಟುಂಬದವರೇ ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಸುತ್ತಮುತ್ತಲಿನ ಗ್ರಾಮದ ರೈತರು ಜಮೀನನ್ನು ಕಳೆದುಕೊಂಡು 9 ವರ್ಷಗಳಿಂದ ಬೆಳೆ ಪರಿಹಾರ ಪಡೆಯಲು ಸಾಧ್ಯವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಇಲ್ಲಿನ ರೈತರಿಗೆ ಮತ್ತೆ ಅವರ ಭೂಮಿ ವಾಪಸ್‌ ನೀಡಿ ಅಥವಾ ಸೂಕ್ತ ಪರಿಹಾರ ಒದಗಿಸಿ, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ಭೂಸ್ವಾಧೀನ ಇಲಾಖೆಯ ವಿಶೇಷ ಅಧಿಕಾರಿ ಅರುಳ್‌ಕುಮಾರ್‌ ಶೀಘ್ರದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಕೊಡಸುವುದಾಗಿ ಹಾಗೂ ಉದ್ಯೋಗ ಅವಕಾಶ ಕಲ್ಪಿಸುವುದರ ಬಗ್ಗೆ ಮುಖ್ಯ ಕಚೇರಿಯ ಅಧಿಕಾರಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತರಾದ ಚಿಕ್ಕಲಿಂಗಯ್ಯ, ರಾಚಣ್ಣ, ನಾಗರಾಜು, ಅಂಥೋಣಿ, ಶಿವಮಲ್ಲು, ಶಂಭೇಗೌಡ, ಕೃಷ್ಣಶೆಟ್ಟಿ, ಸಿದ್ದರಾಜು, ನಾಗ ರಾಜಪ್ಪ, ಬಸಪ್ಪದೇವರು, ಶಿವರಾಮೇಗೌಡ ಇತರರಿದ್ದರು.

LEAVE A REPLY

Please enter your comment!
Please enter your name here