ಕೆರೆಗಳು ಕಾಣೆಯಾಗಿವೆ…!?

0
111

ಬೆಂಗಳೂರು/ಮಹದೇವಪುರ;- ಬೆಂಗಳೂರು ನಗರದಲ್ಲಿ 350 ಕ್ಕೂ ಹೆಚ್ಚು ಕೆರೆಗಳಿದ್ದು ಅದರಲ್ಲಿ ಕೆಲ ಕೆರೆಗಳು ಒತ್ತುವರಿಯಿಂದ ಕಾಣೆಯಾಗಿವೆ ಎಂದು ಉಪಮುಖ್ಯಮಂತ್ರಿ ಹಾಗು ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಡಾ||ಜಿ.ಪರಮೇಶ್ವರ್ ತಿಳಿಸಿದರು.
ಕ್ಷೇತ್ರದ ಬೆಳಂದೂರು ವಾರ್ಡ್ ಬೆಳಂದೂರು ಕೆರೆಗೆ ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೊದಲ ಬಾರಿಗೆ ಬೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಗರದಲ್ಲಿ ಹಾಲಿ ಇರುವ ಕೆರೆಗಳ ಅಭಿವೃದ್ದಿಗೆ ಪಾಲಿಕೆ ಹಾಗು ಬಿಡಿಎ ವತಿಯಿಂದ ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದರು. ಬೆಂಗಳೂರು ಅಭಿವೃದ್ದಿಯಾಗುತ್ತಿದ್ದರೂ ಕೆರೆಗಳು ಕುಲುಷಿತವಾಗುತ್ತಿದ್ದು ಎಸ್ಟಿಪಿ ಪ್ಲಾಂಟ್ ಮೂಲಕ ಸ್ವಚ್ಚಗೊಳಿಸಿ ಕೆರೆಗಳಿಗೆ ನೀರು ಬೀಡಲು ಸೂಚನೆ ನೀಡಲಾಗುವುದೆಂದರು. ಕಲುಷಿತಗೊಂಡಿರುವ ಕೆರೆಗಳನ್ನು ಸರಿಪಡಿಸುವುದಕ್ಕೆ ಗಡವು ನೀಡಿದ್ದು 3 ತಿಂಗಳಲ್ಲಿ ಅದರ ಉತ್ತರ ತಿಳಿಯಲಿದೆ ಎಂದರು. ಈಗಾಗಲೆ ಬೆಳಂದೂರು ಹಾಗು ವತರ್ೂರು ಕೆರೆಗಳಿಂದ ಹೊರ ಬಿಟ್ಟಿರುವ ಹೆಚ್ಚುವರಿ ಕೊಳಚೆ ನೀರನ್ನು ಎಸ್ಟಿಪಿ ಪ್ಲಾಂಟ್ ಮೂಲಕ ಸ್ವಚ್ಚಗೊಳಿಸಿ ಕೋಲಾರ ಜಿಲ್ಲೆಗೆ ಪೈಪ್ಲೈನ್ ಮೂಲಕ ಹರಿಸಲಾಗುತ್ತಿದೆ ಎಂದರು. ನಗರದ ಕೆರೆಗಳಿಗೆ ಹರಿಯುತ್ತಿರುವ ಕೊಳಚೆ ನೀರನ್ನು ಸ್ವಚ್ಚಗೊಳಿಸಲು ಅವಸ್ಯಕತೆ ಇರುವ ಕಡೆ ಎಸ್ಟಿಪಿ ಪ್ಲಾಂಟ್ಗಳನ್ನು ತೆರೆಯಲಾಗುವುದೆಂದರು. ಕೆಲ ಖಾಸಗಿ ಕಂಪನಿಗಳು ಹಾಗೂ ಅಪಾಟರ್್ಮೆಂಟ್ಗಳಿಂದ ಸ್ವಚ್ಚಗೊಳಿಸದೆ ಕೊಳಚೆ ನೀರನ್ನು ಹರಿಸುತ್ತಿರುವುದರಿಂದ ಕೆರೆಗಳ ನೀರು ಕಲುಷಿತವಾಗಿ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು ಅದಕ್ಕೆಲ್ಲಾ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಅವರು ತಿಳಿಸಿದರು. ಇದೆ ಸಮಯದಲ್ಲಿ ಮಹಾಪೌರರಾದ ಸಂಪತ್ರಾಜ್ ಮಾತನಾಡಿ ನಗರದಲ್ಲಿ ವತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಮಾಡಿ ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದೆಂದರು. ಆಯಾ ಜೊನ್ನಿಂದ ಗುತ್ತಿಗೆದಾರರು ಸರಿಯಾದ ಸಮಯಕ್ಕೆ ಬಿಲ್ ನೀಡದಕರಣ ಪೌರ ಕಾಮರ್ಿಕರ ವೇತನ ತಡವಾಗಿದ್ದು ಕೂಡಲೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕಲುಶಿತ ನೀರಿನಿಂದ ಕೆರೆಗಳಲ್ಲಿ ಸಮಸ್ಯೆ ಹೆಚ್ಚಾಗಿದ್ದು ಬೆಂಗಳೂರು ಜಲ ಮಂಡಳಿಯು ಪೈಪ್ಲೈನ್ ಅಳವಡಿಸಿ ನೀರು ಬಿಡಬೇಕೆಂದು ಅವರು ಸೂಚಿಸಿದರು.
ಈ ಸಂದರ್ಬದಲ್ಲಿ ಸಂಸದ ಪಿ.ಸಿ.ಮೊಹನ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಉಪ ಮಹಾಪೌರರಾದ ಪದ್ಮಾವತಿ ನರಸಿಂಹಮೂತರ್ಿ, ಪಾಲಿಕೆ ಸದಸ್ಯೆ ಆಶಾ ಸುರೇಶ್,ಬಿಡಿಎ ಹಾಗೂ ಪಾಲಿಕೆ ಅದಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here