ಕೆರೆಯಂಗಳದ ಕೊಳಗೇರಿ ಪ್ರದೇಶದಲ್ಲಿ ನಿರ್ಮಿಸಿರುವ ಮನೆಗಳಿಗೆ ಹಕ್ಕುಪತ್ರ

0
155

ಬೆಂಗಳೂರು (ಕೃಷ್ಣರಾಜಪುರ): ಕೆರೆಯಂಗಳದ ಕೊಳಗೇರಿ ಪ್ರದೇಶದಲ್ಲಿ ನಿರ್ಮಿಸಿರುವ ಮನೆಗಳಿಗೆ ಸ್ಪೀಕರ್ ಕೊಳಿವಾಡ ಸಮಿತಿ ವರದಿ ಪರಿಶೀಲಿಸಿ ಹಕ್ಕುಪತ್ರ ನೀಡಲಾಗುವುದೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು. ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ, ಕ್ಯಾಲಸನಹಳ್ಳಿ, ಮುನೇಶ್ವರ ನಗರ, ವಿಜಿನಾಪುರ ಬಳಿಯ ಅಂಬೇಡ್ಕರ್‍ನಗರ ಮತ್ತು ಲಕ್ಷ್ಮಣ್‍ಮೂರ್ತಿನಗರ ಪ್ರದೇಶದ ಕೊಳಗೇರಿ ಬಡಾವಣೆಗಳಿಗೆ ಗುರುವಾರ  ಭೇಟಿ ನೀಡಿ ಮಾತನಾಡಿದ ಅವರು, ಕೋಳಿವಾಡ ಸಮಿತಿ ವರದಿಯ ನಂತರ ಪರಶೀಲನೆ ನಡೆಸಿ ಮಾತನಾಡಿದ ಅವರು ನಗರ ವ್ಯಾಪ್ತಿಯಲ್ಲಿರುವ ಕೆಲವು ಕೊಳಗೇರಿ ಪ್ರದೇಶಗಳು ಕೆರೆವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸ್ವೀಕರ್ ಕೋಳಿವಾಡ ಸಮಿತಿ ವರದಿ ಅದರಿಸಿ ಕೆಳಯಂಗಳ ಮತ್ತು ಕೊಳಗೇರಿಯಲ್ಲಿರುವ ಬಡವರ ಮನೆಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದೆಂದು ತಿಳಿಸಿದರು. ಕೆಆರ್ ಪುರ ಕ್ಷೇತ್ರದಲ್ಲಿ ಈಗಾಗಲೆ 1619 ಫಲಾನುಭವಿಗಳನ್ನು ಗುರುತಿಸಲಾಗಿದೆ, ಶಿಥಿಲವ್ಯವಸ್ಥೆ ಯಲ್ಲಿರುವ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಶೀಘ್ರದಲ್ಲೆ ಅನುದಾನ ಬಿಡುಗಡೆ ಮಾಡಿ ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿಕೊಡಲಾಗುವುದೆಂದು ಹೇಳಿದರು. ಕ್ಷೇತ್ರದಲ್ಲಿ ಈಗಾಗಲೆ 1619 ಫಲಾನುಭವಿಗಳನ್ನು ಗುರುತಿಸಲಾಗಿದೆ, ಅವರಿಗೆ ಆದಷ್ಟು ಬೇಗನೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ಸ್ಥಳೀಯ ಶಾಸಕರು ಮನವಿ ಮಾಡಿದ್ದಾರೆ, ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಮತ್ತು ಫ್ಲೆಕ್ಸ್ ಅಳವಡಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ ಸಹ ಇದೇ ತಿಂಗಳ 4 ರಂದು ಸ್ಥಳೀಯ ಶಾಸಕ ಬಸವರಾಜ್ ರವರ ಹುಟ್ಟು ಹಬ್ಬದ ಹಿನ್ನಲೆ ಕ್ಷೇತ್ರದಾಧ್ಯಂತ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಳವಡಿಸಲಾಗಿದೆ ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಇದರ ಬಗ್ಗೆ ಸಚಿವ ಜಾರ್ಜ್‍ರನ್ನು ಕೇಳಿದಾಗ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಹುಟ್ಟು ಹಬ್ಬಕ್ಕೆ ಯಾವುದೇ ರೀತಿ ಫ್ಲಕ್ಸ್ ಅಳವಡಿಸುವುದಿಲ್ಲ, ಯಾರ ಹುಟ್ಟು ಹಬ್ಬಕ್ಕೆ ಅಲವಡಿಸಿದ್ದಾರೋ ಅವರನ್ನೇ ಕೇಳಿ ಎಂದು ಶಾಸಕರೆದುರೇ ತಿಳಿಸಿದರು. ಕ್ಷೇತ್ರದಲ್ಲಿ ಯಾವುದೇ ರೀತಿಯ ಫ್ಲೆಕ್ಸ್‍ಗಳನ್ನು ಅಳವಡಿಸದಂತೆ ಕಾರ್ಯಕರ್ತರಿಗೆ ಸೂಚಿಸದರು ಕಾರ್ಯಕರ್ತರು ಅಭಿಮಾನದಿಂದ ಅಳವಡಿಸಿದಾರೆ ಇದಕ್ಕೆ ಬಿಬಿಎಂಪಿವತಿಯಿಂದ ದಂಡ ವಿಧಿಸಿದರೆ ಭರಿಸಲು ಸಿದ್ದನೆಂದು ಶಾಸಕ ಬಿ.ಎ.ಬಸವರಾಜ ಸರ್ಮಥಿಸಿಕೊಂಡರು. ಈ ಸಂಧರ್ಭದಲ್ಲಿ ಪಾಲಿಕೆ ಸದಸ್ಯರು ಬಿಬಿಎಂಪಿ ಅಧಿಕಾರಿಗಳ ಹಾಜರಿದ್ದರು.

 

LEAVE A REPLY

Please enter your comment!
Please enter your name here