ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ

0
183

ಬೆಂಗಳೂರು/ಕೆಆರ್ ಪುರ :- ಕೆರೆಗಳ ಅಭಿವೃದ್ಧಿ ಯಿಂದ ಸುಂದರ ವಾತಾವರಣ ನಿರ್ಮಾಣವಾಗುವುದು ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು.
ಕೆಆರ್ ಪುರ ವಾರ್ಡ್ ಭಟ್ಟರಹಳ್ಳಿ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೆಳೆಯುತ್ತಿರುವ ನಗರದಲ್ಲಿ ಹಸಿರು ಮಾಯ ವಾಗುತ್ತಿದೆ. ಈ ಕಾಂಕ್ರೀಟ್ ನಾಡಿನಲ್ಲಿ ಹಸಿರು ವಾತಾವರಣ ಸೃಷ್ಟಿ ಮಾಡುವುದಕ್ಕೆ ಜಾಗ ಇರುವುದು ಕೆರೆ ಅಂಗಳದಲ್ಲಿ ಮಾತ್ರ. ಆದ್ದರಿಂದ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿ ಮಾಡಿ ಸಾರ್ವಜನಿಕರಿಗೆ ಸಮರ್ಪಣೆ ಮಾಡಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.
ಭಟ್ಟರಹಳ್ಳಿ ಕೆರೆಯಲ್ಲಿ ಹೂಳು ತೆಗೆಯುವುದು, ವಾಕಿಂಗ್ ಟ್ರಾಕ್ ನಿರ್ಮಾಣ ಮಾಡುವುದು, ಪೆನ್ಸಿಂಗ್ ಹಾಕುವುದು, ಮಕ್ಕಳ ಆಟದ ಜಾಗ ಮಾಡುವುದು ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿಗಳನ್ನು ಒಳಗೊಂಡಿದೆ ಎಂದರು.
ಕೆರೆಯ ಸುತ್ತಮುತ್ತಲಿನ ಜನರು ಕೆರೆಯನ್ನು ಸದುಪಯೋಗಪಡೆಸಿಕೊಂಡು ಕಾಪಾಡಿಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿಯಲ್ಲಿ ಲೋಪ ಕಂಡು ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ಧೇಶಿತ ಸದಸ್ಯ ಆಂತೋಣಿಸ್ವಾಮಿ, ನಿಗಮ ಮಂಡಳಿ ಸದಸ್ಯ ನಾರಾಯಣಸ್ವಾಮಿ, ವಾರ್ಡ್ ಅಧ್ಯಕ್ಷ ಶಿವಪ್ಪ, ಬ್ಲಾಕ್. ಪ್ರ.ಕಾರ್ಯದರ್ಶಿ ಪಟಾಕಿ ರವಿ, ಮುಖಂಡರಾದ ಎಲ್.ಮುನಿಸ್ವಾಮಿ, ಭಟ್ಟರಹಳ್ಳಿ ಮಂಜು, ವೆಂಕಿ, ಮಂಜು ಮತ್ತಿತರರಿದ್ದರು.

LEAVE A REPLY

Please enter your comment!
Please enter your name here