ಕೆರೆ ಏರಿಯ ಬಳಿ ಹೊಸದೊಂದು ರಸ್ತೆ ನಿರ್ಮಾಣ.

0
264

ಬಳ್ಳಾರಿ /ಹೊಸಪೇಟೆ:ಐತಿಹಾಸಿಕ ಕಮಲಾಪುರ ಕೆರೆ ಏರಿಯ ಬಳಿ ಹೊಸದೊಂದು ರಸ್ತೆ ನಿರ್ಮಾಣಕ್ಕೆ ಸರ್ಕಾರ ಕಡಿವಾಣ ಹಾಕಿದ್ದು, ಕೆರೆಯ ಏರಿಯ ಮೇಲೆ ಹಾದು ಹೋಗಿರುವ ಹಳೆ ರಸ್ತೆಯಲ್ಲಿ 3 ಅಡಿಯಷ್ಟು ವಿಸ್ತರಣೆಗೆ ಅನುಮತಿ ನೀಡಿದೆ.

ವಿಜಯನಗರ ಆಳರಸರ ಕಾಲ ಕಮಲಾಪುರ ಕೆರೆ ಬಳಿ 2015ರ ಫೆಬ್ರವರಿಯಲ್ಲಿ ಹೊಸದೊಂದು ರಸ್ತೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ, ಮುಂದಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಂದಿನ ಅಧಿಕಾರಿ ಪ್ರಕಾಶ ನಾಯಕ
ಅವರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆಯ ಕೇಂದ್ರ ಕಚೇರಿಗೆ ಪತ್ರ ಬರೆದು, ಅಕ್ಷೇಪಿಸಿದರು.

ಅಲ್ಲದೆ, ರಾಜ್ಯ ಸರ್ಕಾರದ ಸಂಸ್ಕೃತಿ ಮತ್ತು ಪುರಾತತ್ವ ಸಮತಿ ಸದಸ್ಯ ಪೂಣಚ್ಚ ಬೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ನಡುವೆ ಪುನಃ ಕಾಮಗಾರಿ ಆರಂಭಗೊಂಡಿತ್ತು. 2016 ಸೆ.16ರಂದು ಯುನೆಸ್ಕೋ ಭಾರತದ ಪ್ರತಿನಿಧಿ ಶಿಗಿರೋ ಅವರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಆಯುಕ್ತರಿಗೆ ಪತ್ರ ಬರೆದು, ರಸ್ತೆ ಕಾಮಗಾರಿ ಸಂಬಂಧಪಟೆಂತೇ ವರದಿ ನೀಡಲು ಕೋರಿದ್ದರು. ಈ ಹಿನ್ನಲೆಯಲ್ಲಿ ಪುನಃ ಕಾಮಗಾರಿ ಸ್ಥಗಿತಗೊಂಡಿತ್ತು.

ಬೆಂಗಳೂರಿನಲ್ಲಿ ಈಚಗೆ ಸಭೆ ಸೇರಿ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಭಾರತೀಯ ಪುರಾತತ್ವ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೊಸ ರಸ್ತೆ ಬದಲಿಗೆ ಇರುವ ಹಳೇ ರಸ್ತೆಯಲ್ಲಿ 3ಅಡಿಯಷ್ಟಯ ವಿಸ್ತರಣೆ ಮಾಡಲು ನಿರ್ಧರಿಸಿದೆ. ಅದರನ್ವಯ ಇದೀಗ ರಸ್ತೆ ವಿಸ್ತರಣೆ ಕಾರ್ಯ ನಡೆದಿದೆ.

ಸಂಡೂರು,ಹೊಸಪೇಟೆ ಹಾಗೂ ಸಿರಗುಪ್ಪ ಒಳಗೊಂಡ ರಾಜ್ಯ ಹೆದ್ದಾರಿ 49ಇದಾಗಿರುವುದರಿಂದ ಸುಗಮ ಸಂಚಾರಕ್ಕೆ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಶಶಿಧರಯ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here