ಕೆರೆ ಮಣ್ಣಿಗೆ ಪೊಲೀಸ್ ಕಾವಲು

0
206

ಬಳ್ಳಾರಿ/ಹೊಸಪೇಟೆ: ಕೆರೆಯ ಮಣ್ಣನ್ನು ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮಹೊಲ,ಗದ್ದೆಗಳಿಗೆ ಹೊತ್ತೊಯ್ಯುತ್ತಿದ್ದ ರೈತರನ್ನು ತಡೆದ ಅಧಿಕಾರಿಗಳು ವಿಜಯನಗರದ ಅರಸರು ಕಾಲದ ಕಮಲಾಪುರದ ಕೆರೆಯಲ್ಲಿ ಪ್ರತಿವರ್ಷ ನೀರು ಕಡಿಮೆ ಆಗುತ್ತಿದ್ದಂತೆ ಸುತ್ತಮುತ್ತಲಿನ ರೈತರು ಕೆರೆಯಮಣ್ಣು ಫಲವತ್ತೆತೆಯಿಂದ ಕೂಡಿರುವುದರಿಂದ ತಮ್ಮ ಸ್ವಂತ ಖರ್ಚಿನಲ್ಲೇ ಒಯ್ಯುತ್ತಾರೆ ಅದೇ ರೀತಿ ನಿನ್ನೆಯಿಂದ ನಾಲ್ಕೈದು ಜೆಸಿಬಿಯಿಂದ ಹತ್ತಾರು ಟ್ರಾಕ್ಟರ್‍ಗಳಲ್ಲಿ ಮಣ್ಣನ್ನು ಒಯ್ಯುತ್ತಿದ್ದರು  ಆದರೆ ಇಂದು ಬೆಳಗ್ಗೆ ಕಮಲಾಪುರ ನಾಡಕಛೇರಿ  ಅಧಿಕಾರಿಗಳು ಧಿಡೀರ್ ಸ್ಥಳಕ್ಕಾಗಮಿಸಿ ಮಣ್ಣು  ಕೊಂಡಯ್ಯುತ್ತಿದ್ದ ಟ್ರಾಕ್ಟರ್ ಗಳನ್ನು ಹಿಂದಿರಿಗಿಸಿದ್ದಾರೆ ನೀವುಕೆರೆಯ ಮಣ್ಣನ್ನು ಒಯ್ಯ ಬೇಕಾದರೆ ಹಿರಿಯ  ಅಧಿಕಾರಿಗಳ ಪರವಾನಗಿ ಪಡೆದುಕೊಳ್ಳಿ ಎಂದು ಹೇಳಿ ಕೆರೆಯ ಹತ್ತಿರ ಪೊಲೀಸ್ ಕಾವಲು ಹಾಕಿದ್ದಾರೆ   ಈ ಕುರಿತು ವಾಹಿನಿಯೊಂದಿಗೆ  ರೈತ ಉದ್ದಾನಪ್ಪ  ಮಾತನಾಡಿದ್ದಾರೆ

LEAVE A REPLY

Please enter your comment!
Please enter your name here