ಕೆಸರಿನಲ್ಲಿ ಮುಳುಗಿದ ಆನೆ

0
217

ಚಾಮರಾಜನಗರ: ನೀರು ಕುಡಿಯಲು ಜಲಾಶಯದ ಹಿನ್ನೀರಿಗೆ ಹೋದ ಆನೆ‌ ಕೆಸರಿನಲ್ಲಿ ಮುಳುಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಬಿಆರ್ ಟಿ ಹುಲಿ ರಕ್ಷಿತಾರಣ್ಯಕ್ಕೆ ಸೇರಿದ ಯಳಂದೂರು ವಲಯದ ಕೃಷ್ಣಯ್ಯನಕಟ್ಟೆ ಜಲಾಶಯದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಕಾಡಿನಿಂದ ನೀರು ಅರಸಿ, ಜಲಾಶಯಕ್ಕೆ ಬಂದ ಆನೆ, ಹಿನ್ನೀರಿನ ಕೆಸರಿನಲ್ಲಿ ಶೇ.೭೦ ರಷ್ಟು ಮುಳುಗಿದೆ. ಸಂಪೂರ್ಣ ನಿತ್ರಾಣಗೊಂಡಿರುವ ಆನೆಯ ರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ, ಕ್ರೇನ್ ಬಳಸಿ ಆನೆಯನ್ನು ಎತ್ತುವ ಕಾರ್ಯಾಚರಣೆ ಆರಂಭಿಸಿದೆ. ಕೆಸರಿನಲ್ಲಿ ಮುಳುಗಿರುವ ಆನೆಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿದ್ದು, ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಜನರನ್ನು ಚದುರಿಸಲು ಹರಸಾಹಸ ಪಡುತ್ತಿದ್ದಾರೆ.

LEAVE A REPLY

Please enter your comment!
Please enter your name here