ಕಾಲು ಬಾಯಿ ಜ್ವರ ಲಸಿಕೆ ಅಭಿಯಾನ

0
128

ಶಿಡ್ಲಘಟ್ಟ: ಪ್ರತಿ ಆರು ತಿಂಗಳಿಗೊಮ್ಮೆ ಕಾಲು ಬಾಯಿ ಜ್ವರ ಲಸಿಕೆಯನ್ನು ರಾಸುಗಳಿಗೆ ಹಾಕಿಸುವುದರಿಂದ ಆರೋಗ್ಯವಾಗಿ ಬೆಳೆಯುತ್ತವೆ. ಎಂದು ಪಶು ವೈದ್ಯ ಪರೀಕ್ಷಕ ಸೀನಪ್ಪ ಹೇಳಿದರು. ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಪಶು ಇಲಾಖೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಆರನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ರಾಸುಗಳಿಗೆ ಹಾಕುವುದರ ಮೂಲಕ ಮಾತನಾಡಿದ ಅವರು ದನಕರುಗಳು ಭಯಂಕರ ಕಾಯಿಲೆಯಾದ ಕಾಲುಬಾಯಿ ರೋಗವನ್ನು ತಡೆಗಟ್ಟಲು ರೈತರು ತಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕಿದೆ. ಈ ಲಸಿಕೆ ಹಾಕುವುದರಿಂದ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿ ಆರೋಗ್ಯಕರವಾಗಿರಲು ಸಹಕಾರವಾಗುತ್ತದೆ ಎಂದರು. ಕೆ.ಮುತ್ತುಕದಹಳ್ಳಿ ಹಾಲು ಡೈರಿ ಕಾಯ೯ದಶಿ೯ ರಾಮಣ್ಣ ಮಾತನಾಡಿ ಈ ಹಿಂದೆ ರಾಜ್ಯದಲ್ಲಿ ತಲೆದೋರಿದ ಕಾಲುಬಾಯಿ ರೋಗಕ್ಕೆ ಸುಮಾರು ಜಾನುವಾರುಗಳು ಮರಣ ಹೊಂದಿವೆ. ಸರ್ಕಾರದ ಜೊತೆಗೆ ರೈತರೂ ಕೂಡ ಮುಂಜಾಗ್ರತೆಯಿಂದ ರೋಗ ಹರಡದಂತೆ ಹಾಗೂ ರೋಗಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಈ ರೋಗವನ್ನು ತಡೆಗಟ್ಟಬೇಕು ಎಂದರು. ಗ್ರಾಮದ ಎಲ್ಲಾ ಜಾನುವಾರುಗಳನ್ನು ಡೈರಿ ಹತ್ತಿರ ಕರೆತಂದು ತಮ್ಮ ಧನಕರುಗಳಿಗೆ ಲಸಿಕೆ ಹಾಕಿಸುವುದರಲ್ಲಿ ಯಶಸ್ವಿಯಾಗಿದ್ದರು

LEAVE A REPLY

Please enter your comment!
Please enter your name here