ಕೇಂದ್ರ ತಜ್ಞರ ತಂಡ ಭೇಟಿ

0
220

ಬಳ್ಳಾರಿ / ಸಂಡೂರು ತಾಲೂಕಿನ ವ್ಯಾಪ್ತಿಯ ಕುಮಾರಸ್ವಾಮಿ ದೇವಸ್ಥಾನದ ಸುತ್ತನುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಧಕ್ಕೆಯಾಗಲಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಗಣಿ ಪ್ರದೇಶಗಳ ಅಧ್ಯಯನಕ್ಕಾಗಿ ಇದೆ ಸೆ.7 ರಂದು ಕೇಂದ್ರ ತಜ್ಞರ ತಂಡ ಸಂಡೂರಿಗೆ ಭೇಟಿ ನೀಡಲಿದೆ.

ಸೆ.7 ರಂದು ಸಂಡೂರಿಗೆ ಭೇಟಿ ನೀಡಲಿರುವ ಕೇಂದ್ರ ತಜ್ಞರ ತಂಡ ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿರುವ ಪುರಾತನ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಸ್ಥಾನವಿರುವ ಕುಮಾರಸ್ವಾಮಿ ಬೆಟ್ಟದ ಸುತ್ತಲಿನ ಗಣಿಗಾರಿಕೆ ಪ್ರದೇಶದ ಅಧ್ಯಯನ ನಡೆಸಲಿದೆ.
ಭಾರತೀಯ ಪುರಾತತ್ವ ಇಲಾಖೆ, ದೆಹಲಿ ಕೇಂದ್ರ ಕಛೇರಿಯ ಇಲಾಖೆಯ ದಕ್ಷಿಣ ವಲಯದ ನಿರ್ದೇಶಕಿ ಸತ್ಯಭಾಮ ಬದ್ರಿನಾಥ ನೇತೃತ್ವದಲ್ಲಿ ಪುರಾತತ್ವ ತಜ್ಞರಾದ ಎಫ್.ವಿ.ಟಿ ಹಳಕಟ್ಟಿ, ಸಿ.ಎಮ್.ಕೇಶವ್, ಕೆ.ಮೂರ್ತೇಶ್ವರಿ, ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕಿ ಮಂಜುಳಾ, ಭೂ ತಾಂತ್ರಿಕ ತಜ್ಞ  ಪ್ರೊ.ರಘುನಾಥ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿ ಪ್ರೊ.ಜಗದೀಶ್ ನೇತೃತ್ವದ ಸೆಪ್ಟೆಂಬರ್ 7 ರಂದು ದೇವಾಲಯಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ನಡೆಸಲಿದೆ.
ಕಳೆದ 2016 ಅಕ್ಟೋಬರ್ 24 ರಂದು ಜನ ಸಂಗ್ರಾಮ ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಮಾಳಗಿ, ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದ 1200 ವರ್ಷ ಪುರಾತನ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಸ್ಥಾನವಿರುವ ಕುಮಾರಸ್ವಾಮಿ ಬೆಟ್ಟದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆ ನಿಷೇಧಿಸುವ ಕುರಿತು ಭಾರತೀಯ ಪುರಾತತ್ವ ಇಲಾಖೆ, ದಕ್ಷಿಣ ವಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಈ  ಕುರಿತಂತೆ ಕಳೆದ ಆ.23 ರಂದು ದೆಹಲಿಯ ಭಾರತೀಯ ಪುರಾತತ್ವ ಇಲಾಖೆಯ ಡೈರೆಕ್ಟರ್ ಜನರಲ್ ಉಷಾ ಶರ್ಮ ರಿಗೆ ಮನವಿ ಸಲ್ಲಿಸಿ ಶೀಘ್ರ ಪುರಾತತ್ವ ತಜ್ಞರ ಮತ್ತು ಭೂ ವಿಜ್ಞಾನಿಗಳ ತಂಡವನ್ನು ಕಳುಹಿಸಿ ದೇವಾಲಯವಿರುವ ಕುಮಾರಸ್ವಾಮಿ ಬೆಟ್ಟವೂ ಧಾರ್ಮಿಕ, ಪುರಾತತ್ವ ಮತ್ತು ಜೀವವೈವಿಧ್ಯವಿರುವ “ರಾಷ್ಟ್ರೀಯ ಮಹತ್ವದ ಪಾರಂಪರಿಕ ತಾಣ” ವೆಂದು ಘೋಷಿಸಿ ಈ ಬೆಟ್ಟದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆ ನಿಷೇಧಿಸುವಂತೆ ಕೋರಿದ್ದರು.

LEAVE A REPLY

Please enter your comment!
Please enter your name here