ಕೇಂದ್ರ ಸರ್ಕಾರದ ಯೋಜನೆ ಎಲೆಕ್ಷನ್ ಗಿಮಿಕ್..!

0
335

ಕೇಂದ್ರ ಸರ್ಕಾರದ ಕಾರ್ಯಕ್ರಮ ಯೋಜನೆ ಎಲೆಕ್ಷನ್ ಗಿಮಿಕ್ : ಕೆ.ಹೆಚ್.ಮುನಿಯಪ್ಪ

ಬೆಂಗಳೂರು/ಮಹದೇವಪುರ:- ವಿಧಾನಸಭಾ ಕ್ಷೇತ್ರದ ಕಾಡುಗುಡಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಎಂ.ಎಲ್.ಎ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸಿ.ಶ್ರೀನಿವಾಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಸಂಸದ ಕೆ.ಹೆಚ್. ಮುನಿಯಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಕಾರ್ಯಕ್ರಮ ಘೋಷಣೆ ಕೇವಲ ಎಲೆಕ್ಷನ್ ಗಿಮಿಕ್ ಆಗಿದೆ.
ರೈತರಿಗೆ ಕೇಂದ್ರ ನೀಡಿದ ಕೊಡುಗೆ ಶೂನ್ಯ, ಆದರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರ ಕಾಳಜಿ‌ ವಹಿಸಿ ಹಲವು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಎಂಎಲ್ಸಿ ನಾರಾಯಣಸ್ವಾಮಿ ಮಾತನಾಡಿ ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿ ತಿರುಕನ ಕನಸು, ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಮಾಡಿರುವ ಅಭಿವೃದ್ಧಿ ಶೂನ್ಯ, ಪೆಟ್ರೋಲ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು ಚುನಾವಣಾ ಸಂದರ್ಭದಲ್ಲಿ ಮೋದಿ ಮೋಡಿ ಮಾತುಗಳಿಂದ ಮೋಸ ಮಾಡ್ತಾರೆ ಎಂದು ಪ್ರಧಾನಿ ವಿರುದ್ದ ಗುಡಿಗಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಬಿಬಿಎಂಪಿ ಸದಸ್ಯರಾದ ಉದಯ್ ಕುಮಾರ್, ಹರಿ ಪ್ರಸಾದ್, ರಮೇಶ್, ಪಾಲಿಕೆ ಮಾಜಿ ಸದಸ್ಯ ಆಂಜನೇಯ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಜಯರಾಮ ರೆಡ್ಡಿ, ಪಕ್ಷದ ಹಿರಿಯ ಮುಖಂಡರಾದ ರಾಜಣ್ಣ,ಮಾರಪ್ಪ, ಕೆಂಪರಾಜ್, ಜಗದೀಶ್ ರೆಡ್ಡಿ, ರಾಮಕೃಷ್ಣಪ್ಪ, ಸಾವಿರಾರು ಕಾರ್ಯಕರ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here