“ಕೈ”ಕಾರ್ಯಕರ್ತರಿಗೆ ಸೋಲಾರ್ ಶಾಕ್…

0
1227

ತುಮಕೂರು/ ಪಾವಗಡ :- ಇಂದಿನಿಂದ ಕಾಂಗ್ರೇಸ್ ಪಕ್ಷದ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿಯುವೆ ಎಂದು ಸರ್ಕಾರಿ ಕೆಲಸಕ್ಕೆ ರಾಜಿನಾಮೆ ನೀಡಿರುವ ಗುಜ್ಜನಡು ಬಲರಾಮ್ ತಿಳಿಸಿದ್ದಾರೆ.

ಪಾವಗಡ ಪಟ್ಟಣದ ಶ್ರೀಆಂಧ್ರಗಿರಿ ಕಲ್ಯಾಣ ಮಂಟಪ ದಲ್ಲಿ ನಡೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನನ್ನ ಸರ್ಕಾರಿ ಕೆಲಸಕ್ಕೆ ಶುಕ್ರವಾರ ರಾಜಿನಾಮೆಸಲ್ಲಿಸಿ ಕಾಂಗ್ರೇಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದಿದ್ದೇನೆ. ಇಂದಿನಿಂದ ನಾನು ಕಾಂಗ್ರೇಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಎಂದು ತಿಳಿಸಿದ್ದಾರೆ.
ನನ್ನ ಸರ್ಕಾರಿ ಸೇವೆ ಇನ್ನೂ ಐದು ವರ್ಷಗಳು
ಕಾಲವಿದ್ದರೂ ಪಾವಗಡ ತಾಲ್ಲೂಕಿನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಮಹದಾಸೆಯಿಂದ ಸರ್ಕಾರೀಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪಾವಗಡ ವಿದಾನ ಸಭಾ ಕ್ಷೇತ್ರದ ತಾಲ್ಲೂಕಿನ ಕಾಂಗ್ರೇಸ್ ಪಕ್ಷದ ಆಕಾಂಕ್ಷಿ ನಾನಾಗಿದ್ದೇನೆ ಎಂದು ತಿಳಿಸಿದ ಅವರು ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಪಾವಗಡ ಮೀಸಲು ಕ್ಷೇತ್ರದಲ್ಲಿ ಹೊಸ ಮುಖದ ನಿರೀಕ್ಷೆಯನ್ನು ಅರಿತ ತಿರುಮಣಿ ಸೋಲಾರ್ ಪ್ಲಾಂಟಿನ ಮುಖ್ಯಹುದ್ದೆಯನ್ನು ತ್ಯಜಿಸಿದ ಗುಜ್ಜನಡು ಬಲರಾಮ್ ರಾಜಕೀಯ ಅರಂಗೇಟ್ರಂ ಮಾಡಿದ್ದು ಅದರಲ್ಲೂ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ವೆಂಕಟರಮಣಪ್ಪರನ್ನು ಪರೋಕ್ಷವಾಗಿ ಕಡೆಗಣನೆಗೆ ಮುಂದಾಗಿದ್ದು ಮಾಜಿಶಾಸಕರ ಬೆಂಬಲಿಗರಿಗೆ ಮತ್ತು ಕೈ ಕಾರ್ಯಕರ್ತರಿಗೆ ಶಾಕ್ ನೀಡಿದಂತಾಗಿದೆ

LEAVE A REPLY

Please enter your comment!
Please enter your name here