ಕೊಲೆ ಆರೋಪಿಗಳು ಅಂದರ್..

0
145

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಇತ್ತೀಚೆಗೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಬೆಳವಂಗಲ ವ್ಯಾಪ್ತಿಯಲ್ಲಿ ಮುದ್ದಕೃಷ್ಣಪ್ಪ ಎಂಬುವವನ ಮೇಲೆ ನಡೆದಿದ್ದ ಶೂಟೌಟ್ ಪ್ರಕರಣದ ಕೊಲೆ ಆರೋಪಿಗಳನ್ನು ಬಂದಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಗ್ರಾಮಾಂತರ ಠಾಣೆ ಪೊಲೀಸರು.

ಪಿತ್ರಾರ್ಜಿತ ಆಸ್ತಿ ಮತ್ತು ವೈಷಮ್ಯದಿಂದ ಸ್ವಂತ ಚಿಕ್ಕಪ್ಪನನ್ನೇ ಬಾಡಿಗೆ ಪಿಸ್ತೂಲಿನಿಂದ ಗುಂಡಿಕ್ಕಿ ಕೊಲೆಮಾಡಿದ್ದ ಆರೋಪಿ ರವಿಕುಮಾರ್ (28), ರಾಮಾಂಜಿನಪ್ಪ(34),ಎಂ‌.ಎಸ್.ಜಗದೀಶ(27),ಹನುಮಂತರಾಯಪ್ಪ(66),ಬಿ.ಹೆಚ್.ನಿತ್ಯಾನಂದ(58),ವರದರಾಜು_(32). ಎನ್.ಪುಟ್ಟಾಚಾರ್(68) ಮತ್ತು ಇದೇ ಪ್ರಕರಣಕ್ಕೆ ಸಂಬಂದಿದಂತೆ ಶ್ರೀನಿವಾಸ(28), ಬಿಆರ್. ಕೃಷ್ಣಪ್ಪ(42)ಎಂಬುವ ಆರೋಪಿಗಳನ್ನು ಬಂದಿಸಿ, ಕೊಲೆ ಪ್ರಕರಣಕ್ಕೆ ಬಳಸಿದ್ದರೆನ್ನಲಾದ ಎರಡು ಕಾರು ಮತ್ತು ಎರಡು ಬಂದೂಕುಗಳನ್ನು ವಶ ಪಡೆಸಿ ಕೊಳ್ಳಲಾಗಿದೆ.
ಕೇವಲ ಐದುದಿನಗಳಲ್ಲಿ ಕೊಲೆ ಪ್ರಕರಣವನ್ನು ಭೇದಿಸಿದ ಡಿವೈಎಸ್ಪಿ ನಾಗರಾಜ್ ರವರ ಮಾರ್ಗದರ್ಶನ ದಲ್ಲಿ ತಂಡದ ವೃತ್ತ ನಿರೀಕ್ಷಕ ಜಿ.ಸಿದ್ದರಾಜು, ಎಂ.ಎನ್. ನಾಗರಾಜು,ಡಿಸಿಐಬಿ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದ ಎಸ್ಐ.ರಾಘವೇಂದ್ರ, ಎಂ.ಎಸ್.ರಾಜು, ಮುತ್ತು ರಾಜ್, ಬಿ.ಕೆ.ಪಾಟೀಲ್, ಪೊಲೀಸ್ ಅಧಿಕಾರಿಗಳನ್ನು ಮತ್ತು ಪೊಲೀಸ್ ಸಿಬ್ಬಂಧಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧೀಕ್ಷಕರು ಅಮಿತ್ ಸಿಂಗ್ ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here