ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ..

0
130

ರಾಯಚೂರು:ಕೊಲೆ ಮಾಡಿದ ಆರೊಪಿಗೆ 1 ನೇ ಹೆಚ್ಚುವರಿ ನ್ಯಾಯಾದೀಶ ಎಂ ಮಹಾದೇವಯ್ಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಮಾನ್ವಿ ತಾಲೂಕಿನ ಹರವಿ ಬಸವಣ್ಣ ಕ್ಯಾಂಪನ ೨೦ ವರ್ಷದ ರಮೇಶ ನಾಯಕನನ್ನು ಆರೋಪಿ ರಮೇಶ ಗೊಲ್ಲರ್ ಕಳೆದ 7-9-2013 ರಂದು ಕೊಲೆ ಮಾಡಿದ್ದ. ಆರೊಪಿ ಕಂಪ್ಯೂಟರ್ ಕಲಿಕೆ ವಿಷಯಕ್ಕೆ ಜಗಳವಾಡಿ ಚಾಕುವಿನಿಂದ ಇರಿದ ಹಿನ್ನಲೆ ರಮೇಶ ಸಾವಿಗೀಡಾಗಿದ್ದರು. ಈ ಪ್ರಕರಣ ಸಿರವಾರ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಕೈಗೆತ್ತುಕೊಂಡ ಹೆಚ್ಚುವರಿ ನ್ಯಾಯಾಲಯ ವಾದ ವಿವಾದಗಳನ್ನು ನಂತರ ವಿಚಾರಿಸಿದ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಧೀಶರಾದ ಎಂ. ಮಹಾದೇವಯ್ಯ ಆರೋಪಿಗೆ ಇಪ್ಪತ್ತು ಸಾವಿರ ದಂಡ ವಿಧಿಸಿ ಜೀವಾವಧಿ ಶಿಕ್ಷೆ ವಿದಿಸಿ ಆದೇಶ ನೀಡಿದ್ದಾರೆ.

ರಮೇಶ ಗೊಲ್ಲರ್ ಶಿಕ್ಷೆಗೊಳಗಾದ ಆರೋಪಿಯಾಗಿದ್ದು. ಘಟನೆ ಬಗ್ಗೆ ಸರ್ಕಾರದ ಪರ ಸಾರ್ವಜನಿಕ ಅಭಿಯೋಜಕ ಸುದರ್ಶನ ವಾದ ಮಾಡಿದ್ದರು.

LEAVE A REPLY

Please enter your comment!
Please enter your name here