ಕೊಲೆ ಯತ್ನದ ಆರೋಪಿ ಬಂದನ.

0
749

ಚಿಕ್ಕಬಳ್ಳಾಪುರ/ಚಿಂತಾಮಣಿ:-ತಾಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಕಳೆದ ತಿಂಗಳ 28 ಮುಂಜಾನೆ 3-30 ಗಂಟೆಯ ಸಮಯದಲ್ಲಿ ಹರಿತವಾದ ಆಯುಧದಿಂದ ದಾಳಿ ಮಾಡಿ ಕೊಲೆ ಪ್ರಯತ್ನ ಮಾಡಿರುತ್ತಾರೆಂದು ಸುಹೇಲ್ ಬೇಗ್ ನ ಹೆಂಡತಿ ನಗೀನ್ ತಾಜ್ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರನ್ನು ನೀಡಿರುತ್ತಾರೆ.

ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ನಂತರ ತನಿಖಾ ಕಾಲದಲ್ಲಿ ಎಲ್ಲಾ ಆಯಾಮಗಳಿಂದಲೂ ಹಾಗೂ ಗಾಯಾಳುವಿನ ಹಿನ್ನೆಲೆ ಯನ್ನು ಪರಿಶೀಲಿಸಿದಾಗ.ಸುಮಾರು 3-30 ರ ಗಂಟೆಯಲ್ಲಿ ಸುಹೇಲ್ ಬೇಗ್ ಬಿನ್ ಸರ್ದಾರ್ ಬೇಗ್ ರವರ ಮೇಲೆ ಆತನ ಸ್ನೇಹಿತನಾದ ಬೆಂಗಳೂರಿನ ಗೋವಿಂದಪುರ ವಾಸಿಯಾದ ಪರ್ವೀಜ್ ಬೇಗ್ ಬಿನ್ ಸಿಫತ್ ಉಲ್ಲಾ ಬೇಗ್,25 ವರ್ಷರವರು ಸುಹೇಲ್ ಬೇಗ್ ರವರ ತನ್ನ ಹೆಂಡತಿ ಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನೆ, ಮಾತನಾಡುತ್ತಾನೆ ಎಂದು ಆತನನ್ನು ಸಾಯಿಸುವ ಉದ್ದೇಶದಿಂದ ಡ್ರಾಗರ್ ನಿಂದ ಗಡ್ಡದ ಕೆಳಗೆ ಕುತ್ತಿಗೆಗೆ ಹಲ್ಲೆ ಮಾಡಿ ಸಾಯಿಸಲು ಪ್ರಯತ್ನ ಪಟ್ಟಿದ್ದು ,ಪ್ರಸ್ತುತ ಗಾಯಾಳು ಕೋಲಾರದ ಆರ್ ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ಸದರಿ ಪ್ರಕರಣದಲ್ಲಿ ಆರೋಪಿಯಾದ ಪರ್ವೀಜ್ ಬೇಗ್ ಬಿನ್ ಸಿಫತ್ ಉಲ್ಲಾ ಬೇಗ್ ಎಂಬ ಆಸಾಮಿ ಯನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನವನ್ನು ಗೋವಿಂದಪುರದಲ್ಲಿ ದಿನಾಂಕ 03-10-2017 ರಂದು ರಾತ್ರಿ ವಶಕ್ಕೆ ಪಡೆದ ಆರೋಪಿಯನ್ನು ವಿಚಾರಣೆ ಮಾಡಲಾಗಿದ್ದು.ಸದರಿ ಆರೋಪಿಯು ಬೆಂಗಳೂರು ನಗರದ ಜೆ.ಜೆ.ಆರ್ ನಗರ ಪೊಲೀಸ್ ಠಾಣೆ ಯಲ್ಲಿ ರೌಡಿ ಶೀಟರ್ ಆಗಿದ್ದು , ಆರೋಪಿ ಹಲವಾರು ಕಾನೂನು ಬಾಹಿರ ಕೃತ್ಯ ಗಳು ಎಸಗುವ ಪ್ರವೃತ್ತಿ ಯುಳ್ಳವ ನಾಗಿರುತ್ತಾನೆ ಎಂದು ಹಾಗೂ ರೌಡಿ ಶೀಟರ್ ಮೇಲೆ ಕೊಲೆ ಪ್ರಕರಣ ಹಾಗೂ ಹತ್ತು ಕೊಲೆ ಪ್ರಯತ್ನ ಪ್ರಕರಣ ಗಳು ,ಹಲವಾರು ದೊಂಬಿ ಪ್ರಕರಣಗಳು, ಬೆಂಗಳೂರು ನಗರದ ಜೆ.ಜೆ ಆರ್ ನಗರದ ಠಾಣೆ ಬ್ಯಾಟರಾಯನಪುರ ಪೊಲೀಸ್ ಠಾಣೆ ಯಲ್ಲಿ ಹಾಗೂ ಚಾಮರಾಜ ಪೇಟೆ ಪೊಲೀಸ್ ಠಾಣೆ ಗಳಲ್ಲಿ 17 ಕ್ಕಿಂತ ಹೆಚ್ಚು ಪ್ರಕರಣಗಳು ಇರುವುದಾಗಿ ತಿಳಿದು ಬಂದಿರುತ್ತೆ ಹಾಗೂ ಇನ್ನೂ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಘನ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಲಯದ ಅನುಮತಿಯನ್ನು ಪಡೆದು ಪೊಲೀಸ್ ವಶಕ್ಕೆ ಪಡೆಯಬೇಕಾಗಿರುತ್ತೆ.

ಪ್ರಕರಣ ಅರೋಪಿ ಪತ್ತೆ ಕಾರ್ಯವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಕಾರ್ತಿಕ್ ರೆಡ್ಡಿ, ಮಾರ್ಗ ದರ್ಶನ ದಲ್ಲಿ ಚಿಂತಾಮಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕಾದ ಕೃಷ್ಣ ಮೂರ್ತಿ ಹಾಗೂ ಚಿಂತಾಮಣಿ ಗ್ರಾಮಾಂತರ ವೃತ ವೃತ್ತ ನಿರೀಕ್ಷಕ ಆನಂದಕುಮಾರ್ ನೇತಿ ತನಿಖಾಧಿಕಾರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸೈ. ಲಿಯಾಕತ್ ಉಲ್ಲಾ ,ಸಿಬ್ಬಂದಿ ಸಂದೀಪ್, ಹರೀಶ್ ,ನಾಗರಾಜು , ಜಗದೀಶ್ , ಆಂಜಪ್ಪ , ಮುಖೇಶ್ ,ಚಂದ್ರಶೇಖರ್ ,ರಾಘವೇಂದ್ರ ಹಾಗೂ ರವಿ ರವರುಗಳು ಪ್ರಕಾರವನ್ನು ಬೇಧಿಸುವಲ್ಲಿ ಹಾಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

LEAVE A REPLY

Please enter your comment!
Please enter your name here