ಕೋಡಿ ಹರಿದ ವೆಂಕಟೇಶ ಸಾಗರ..

0
383

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ತಾಲ್ಲೂಕಿನ ತಲಕಾಯಲ ಬೆಟ್ಟ ತಪ್ಪಲಿನ ವೆಂಕಟೇಶ ಸಾಗರ ಮೈ ದುಂಬಿ ರಮಣೀಯವಾಗಿ ಕೋಡಿ ಹರಿಯುತ್ತಿದೆ.ಬಹಳ ವರ್ಷಗಳ ನಂತರ ತಾಲ್ಲೂಕಿನಲ್ಲಿ ಹೆಚ್ಚಾಗಿ ಮಳೆ ಬಿದ್ದು ಬಹಳಷ್ಟು ನೀರು ಕೆರೆಯಿಂದ ಕೋಡಿ ಹರಿದು ದುಮುಕುತ್ತಿರುವ ದೃಷ್ಯವನ್ನು ಕಣ್ತುಂಬ ನೋಡಿ ಸಂಭ್ರಮಿಸಲು ಆ ಸಾಗರ ಬಳಿ ಹಲವಾರು ನಗರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸಾಗರ ಬಳಿ ಆಗಮಿಸುತ್ತಿದ್ದಾರೆ.ಈ ಸಾಗರ 1888 ರಲ್ಲಿ ಕಟ್ಟಲು ಪಾರಂಭಿಸಿದ್ದು 1894 ರಲ್ಲಿ ಪೂರ್ಣಗೊಂಡಿರುವ ಸಾಗರವಾಗಿದೆ.ಬೆಂಗಳೂರಿನಿಂದ ಕುಟುಂಬ ಸಮೇತ ಆಗಮಿಸಿದ ಕೆಲವು ದಂಪತಿಗಳು ಕೆರೆಗೆ ಪೂಜೆ ಸಲ್ಲಿಸಿ ಪ್ರತಿ ವರ್ಷ ಇದೇ ರೀತಿ ತುಂಬಿ ಹರಿದು ಜನರಿಗೆ ನೆರವಾಗಲಿ ಎಂದು ಬೇಡಿಕೊಂಡುರು.ಮೈ ದುಂಬಿ ಹರಿಯುತ್ತಿದ್ದ ವೆಂಕಟೇಶ್ವರ ಸಾಗರದ ನೀರಲ್ಲಿ ಬಹಳಷ್ಟು ಯುವಕರು ನೀರಲ್ಲಿ ಮುಳುಗುತ್ತ ತಮ್ಮ ಸಂತೋಷವನ್ನು ಹಂಚಿಕೊಂಡರು.ಈ ಸಾಗರದ ವೈಶಿಷ್ಟತೆ ಕುರಿತು ಕನ್ನಡ ಭಾಷೆಯಲ್ಲಿ ನಾಮಫಲಕ ಇಲ್ಲದೆ ಆಂಗ್ಲ ಭಾಷೆಯಲ್ಲಿ ಇರುವುದರಿಂದ ಬಹಳಷ್ಟು ಜನರಿಗೆ ಸಂಪೂರ್ಣವಾಗಿ ತಿಳಿಯಲಾಗದ ಸ್ಥಿತಿಯಾಗಿದೆ

ಶಿಥಿಲಗೊಂಡಿರುವ ನಾಮಫಲಕ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಕ್ರಮ ವಹಿಸಿ ತುಂಬಾ ವರ್ಷಗಳ ಹಿಂದೆ ಹಾಕಿರುವ ನಾಮಫಲಕ ಮರು ಜೀವ ನೀಡಿ ಈ ಸಾಗರದ ನೀರು ಸಂರಕ್ಷಿಸುವಂತಾಗಲಿ ಎಂದು ಸಾಗರ ವೀಕ್ಷಿಸಲು ಬಂದಿದ್ದ ಜನರು ಆ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬೇಸರ ವ್ಯೆಕ್ತಪಡಿಸಿದರು

LEAVE A REPLY

Please enter your comment!
Please enter your name here