ಕೋತಿ ಚೇಷ್ಟೆ..

0
189

ಬಳ್ಳಾರಿ /ಹೊಸಪೇಟೆ:ಕೋತಿ ಚೇಷ್ಟೆ ಅಂದ್ರೇನು ನಿಮಗ್ಗೊತ್ತಾ?- ಇಷ್ಟಕ್ಕೂ ಕೋತಿ ಚೇಷ್ಟೆ ನೀವು ನೋಡಿದಿರಾ? – ಕೋತಿ ಚೇಷ್ಟೆ ಹೇಗಿರುತ್ತೆ?- ಕೋತಿ ಚೇಷ್ಟೆ ನೋಡಿ ಎಂಜಾಯ್ ಮಾಡ್ತೀವಿ-ಆದ್ರೆ ಅದೇ ನಮ್ ಮಕ್ಳು ಕೋತಿ ಚೇಷ್ಟೆ ಮಾಡಿದ್ರೆ ಬೈತೀವಿ ಯಾಕೇ? – ಕೋತಿ ಚೇಷ್ಟೆ ಮಕ್ಳು ಮಾಡಿದ್ರೆ ಎಂಜಾಯ್ ಮಾಡಿ.

ಸಾಮಾನ್ಯವಾಗಿ ಯಾವುದಾದ್ರೂ ಮಕ್ಳು ಕೋತಿ ಚೇಷ್ಟೆ ಮಾಡಿದ್ರೆ ಯಾಕೆ ಮಕ್ಳೇ ಕೋತಿ ಚೇಷ್ಟೆ ಮಾಡ್ತೀರಾ? ಅಂತ ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಗದರಿಸಿಕೊಳ್ಳೋದು ಕೇಳ್ತಿರ್ತೇವೆ.

ಹೌದು…

ಈ ‌ಕೋತಿ ಚೇಷ್ಟೆ ಅಂದ್ರೆ ಹೇಗಿರುತ್ತೇ? ನೀವೇ ನೋಡಿ…

ಹಂಪಿಯ ಪುರಾಣ ಪ್ರಸಿದ್ಧ ಚಕ್ರತೀರ್ಥದ ಬಳಿ ಇರುವ ಶ್ರೀ ಕೋದಂಡ ರಾಮ ದೇವಸ್ಥಾನದ ಬಳಿ ಈ ಕೋತಿ ಚೇಷ್ಟೆ ನೋಡಿದ ಪ್ರವಾಸಿಗರು ಕೆಲಕಾಲ ಎಂಜಾಯ್ ಮಾಡಿದ್ರು.
ಕೋತಿ ಚೇಷ್ಟೆಗೆ ಅಲ್ಲಿ ಮಿತಿಯೇ ಇರಲಿಲ್ಲ.‌

ಮಾನವ ಸ್ನೇಹಿಯಾಗಿರುವ ಕೋತಿಗಳು ಬೆಳಗಿನ ಉಲ್ಲಾಸದ ಸಮಯದಲ್ಲಿ ಕಾನ್ವೆಂಟ್ ಶಾಲೆಯ ಮಕ್ಕಳ ಹಾಗೆ ಈ ಕೋತಿ ಮರಿಗಳೂ ಕೂಡ, ಒಂದರ ಮೈಮೇಲೆ ಒಂದು ಬಿದ್ದು, ಜಗುಲಿಯ ಕಟ್ಟೆಯ ಮೇಲೆ ಉಲಿದು ನಲಿದು ಕೋತಿ ಚೇಷ್ಟೆ ಮಾಡಿದವು.

ಸಾಮಾನ್ಯವಾಗಿ ಮಕ್ಕಳಿಗೆ ಪೋಷಕರು ಬಳಸುವ ಕೋತಿ ಚೇಷ್ಟೆ ನೋಡಿ ಸ್ಥಳೀಯರು, ಪ್ರವಾಸಿಗರು ಕೆಲಹೊತ್ತು ಮೈ ಮರೆತು ಕೋತಿಗಳ ಚೇಷ್ಟೆ ಗಮನಿಸಿ ಎಂಜಾಯ್ ಮಾಡಿದ್ರು.

ಇಲ್ಲಿ ವಿಷಾದದ ಸಂಗತಿ ಏನೆಂದರೆ, ಕೋತಿಗಳಿಗೆ ಆಹಾರದ ಸಮಸ್ಯೆ ಇದ್ದು, ಸರಿಯಾ ಆಹಾರ ಇಲ್ಲದೇ ಬಡವಾಗಿವೆ. ಕೆಲ ಸ್ಥಳೀಯರು ಕೋತಿಗಳನ್ನು ಕಾಡಿನತ್ತ ಓಡಿಸುತ್ತಾರೆ. ಪ್ರವಾಸಿಗರನ್ನು ಸೆಳೆಯುವಲ್ಲಿ ಕೋತಿಗಳ ಪಾತ್ರವೂ ಇದೆ. ಕೇರಳ ರಾಜ್ಯದಲ್ಲಿ ಆನೆಗಳ ಹಬ್ಬ ಆಚರಿಸುವ ಮೂಲಕ ಅವುಗಳ ಇಷ್ಟದ ಆಹಾರ ನೀಡುತ್ತಾರೆ. ಹಾಗೆಯೇ ಹಂಪಿಯಲ್ಲೂ ಕೂಡ ಕೋತಿಗಳ ಸಂರಕ್ಷಣೆಗಾಗಿ ಆಹಾರ ನೀಡಲು ಯೋಜನೆ ರೂಪಿಸಬೇಕಿದೆ.

LEAVE A REPLY

Please enter your comment!
Please enter your name here