ಕೋ-ಆಪರೇಟಿವ್ ಸಿಟಿ ಬ್ಯಾಂಕ್ ನ-ಶತಮಾನೋತ್ಸವ ಸಮಾರಂಭ

0
184

ಬಳ್ಳಾರಿ /ಹೊಸಪೇಟೆ:ಸ್ಥಳೀಯ ದಿ.ಹೊಸಪೇಟೆ ಕೋ-ಆಪರೇಟಿವ್ ಸಿಟಿ ಬ್ಯಾಂಕ್ ನ ಶತಮಾನೋತ್ಸವ ಸಮಾರಂಭ ದಿ.ನ.19 ರಂದು ನಗರದಲ್ಲಿ ಜರುಗಲಿದೆ.ಸಿಟಿ ಬ್ಯಾಂಕ್ ಸಭಾಂಗಣದಲ್ಲಿಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಎ.ಎಂ.ಶ್ರೀನಿವಾಸ ಈ ವಿಷಯ ತಿಳಿಸಿದರು. ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನ.19 ರಂದು ಬೆಳಿಗ್ಗೆ 10-30 ಗಂಟೆಗೆ, ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಹಾಗೂ ಹರಿಹರ ರಾಜನಹಳ್ಳಿ ಪೀಠದ ಪ್ರಸನ್ನಾನಂದ ವಾಲ್ಮೀಕಿ ಮಹಾಸ್ವಾಮಿಗಳು ಇವರ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭದಲ್ಲಿ ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಎ.ಎಂ.ಶ್ರೀನಿವಾಸ ವಹಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗ ಭಾಗವಹಿಸಲಿರುವ ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್, ಸ್ಮರಣ ಸಂಚಿಕೆ ಬಿಡುಗ‌ಡೆ ಮಾಡಲಿದ್ದಾರೆ. ಸಂಸದ ಬಿ.ಶ್ರೀರಾಮುಲು ಶತಮಾನೋತ್ಸವ ಸಮಾರಂಭದ ನೆನಪಿನ ಕಾಣಿಕೆ ಬಿಡುಗಡೆ ಮಾಡುವರು. ಸ್ಥಳೀಯ ಶಾಸಕ ಆನಂದ್ ಸಿಂಗ್ ಶತಮಾನೋತ್ಸವ ನಾಮಫಲಕ ಅನಾವರಣಗೊಳಿಸಲಿದ್ದಾರೆ. ಕಂಪ್ಲಿ ಶಾಸಕ ಸುರೇಶ್ ಬಾಬು ಕೋರ್ ಬ್ಯಾಂಕಿಂಗ್ ಸಲ್ಯೂಷನ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಬ್ಯಾಂಕಿನ ಆಡಳಿತ ಮಂಡಳಿ ನೂತನ ಸಭಾಂಗಣ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಬ್ಯಾಂಕಿನ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಿದ್ದಾರೆ. ಜಿ.ಪಂ.ಸದಸ್ಯ ಪ್ರವೀಣ್ ಸಿಂಗ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ನಾಗಲಕ್ಷ್ಮಮ್ಮ ಬಿ.ಗೋಪಾಲ್ ಆಚಾರ್ ಸಭಾಂಗಣ ಉದ್ಘಾಟಿಸಲಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ, ಸಮಾರಂಭದ ಗೌರವಾಧ್ಯಕ್ಷ ಬಂಡೆ ರಂಗಪ್ಪ ರನ್ನು ಸನ್ಮಾನಿಸಲಿದ್ದಾರೆ.ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ನಿರ್ದೇಶಕ ಎಸ್.ಎಲ್.ಪ್ರಶಾಂತ್ ಕುಮಾರ್, ಸಹಕಾರ ಸಂಘಗಳ ಜಂಟಿ ನಿಬಂಧಕ ಮೊಹಮದ್ ಜಫರುಲ್ಲಾ ಖಾನ್, ಜಂಟಿ ನಿಬಂಧಕ ಐ.ಎಸ್.ಗಿರಡ್ಡಿ, ಉಪನಿಬಂಧಕ ತಿಪ್ಪೇಸ್ವಾಮಿ, ಸಹಾಯಕ ನಿಬಂಧಕ ಲಿಯಾಕತ್ ಅಲಿ ಭಾಗವಹಿಸುತ್ತಿದ್ದಾರೆ.2016-17ನ ಸಾಲಿನಲ್ಲಿ ಬ್ಯಾಂಕ್ 69.32 ಲಕ್ಷ ರೂ ಲಾಭ ಗಳಿಸಿದ್ದು. ಸಂಘದ ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ನೀಡಿದೆ. ಕಳೆದ 3 ವರ್ಷಗಳಿಂದ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ, ಸನ್ಮಾನಿಸುತ್ತಿದೆ. ಬ್ಯಾಂಕಿನ ಶತಮಾನೋತ್ಸವದ ಅಂಗವಾಗಿ ದಿ.10-11-2017 ರಿಂದ 10-12-2017 ರ ವರೆಗೆ ಬ್ಯಾಂಕಿನಲ್ಲಿ ಠೇವಣಿ ಇಡುವ ಗ್ರಾಹಕರಿಗೆ ಶೇ.10 ರಂತೆ ಹಾಗೂ ಹಿರಿಯ ನಾಗರೀಕರಿಗೆ ಶೇ.10.5 ರಂತೆ ಬಡ್ಡಿ ನೀಡಲಾಗುತ್ತದೆ. ಬ್ಯಾಂಕಿನ ಎಲ್ಲಾ ಸದಸ್ಯರಿಗೆ ಯಶಸ್ವಿನಿ ಭಾಗ್ಯ ಕಲ್ಪಿಸಲಾಗಿದೆ. ಗ್ರಾಹಕರಿಗೆ ಇ ಸ್ಟ್ಯಾಂಪಿಂಗ್ ಸೌಲಭ್ಯ ಕಲ್ಪಿಸಿದೆ. ಠೇವಣಿ ವಿಮೆ ಸೌಲಭ್ಯ ಹಾಗೂ ಹವಾನಿಯಂತ್ರಿತ ವಾತಾವರಣ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಎನ್.ಚಿರಂಜೀವಿ, ನಿರ್ದೇಶಕರುಗಳಾದ ಬಂಡೆ ರಂಗಪ್ಪ, ಗೋಸಲ ಭರಮಪ್ಪ, ಡಿ.ಮಹಾಬಲೇಶ್ವರಯ್ಯ, ಜಿ.ಸೂರಪ್ಪ, ಫಜಲಿ ಅಲಿ, ಡಿ.ಕನಕಾಚಲ, ಗುಂಡಿ ಪ್ರಶಾಂತ್ ಬಂದಿ ಸ್ವಾಮಿ, ಟಿ.ಎಸ್.ಶೀಲಾ, ನೇತ್ರಾವತಿ ಎಸ್.ಗೋಸಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here